ಉಮರ್ ಹಾಜಿ ಕುಂತೂರು
Update: 2024-12-30 18:11 GMT
ಕುಂತೂರು: ಉಮರ್ ಹಾಜಿ ಕುಂತೂರು ಅವರು ಅಲ್ಪಕಾಲದ ಅಸೌಖ್ಯದಿಂದ ಡಿ.29ರಂದು ಸಂಜೆ ನಿಧನರಾದರು.
ಸಮಾಜ ಸೇವಕರಾಗಿದ್ದ ಅವರು ಊರಿನಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮದಲ್ಲಿ ಜಾತಿ ಭೇದ ಇಲ್ಲದೆ ಭಾಗವಹಿಸುತ್ತಿದ್ದರು. ತನ್ನ ಬಹು ಪಾಲು ಸಂಪತ್ತನ್ನು ಬಡವರಿಗೆ ಹಾಗು ದೀನಿ ಸಂಸ್ಥೆಗಳಿಗೆ ಮೀಸಲಿಟ್ಟಿದ್ದರು.
ಮೃತರು ಕುಟುಂಬಸ್ಥರನ್ನು ಹಾಗು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.