ವಿಠ್ಠಲ ಪ್ರಭು
Update: 2023-03-22 16:43 GMT
ಕಾರ್ಕಳ: ತಾಲೂಕಿನ ಎಳ್ಳಾರೆ ಗ್ರಾಮದ ವೈ. ವಿಠ್ಠಲ ಪ್ರಭು (85) ಅವರು ಇಂದು ಅಪರಾಹ್ನ 4 ಗಂಟೆಯ ಸುಮಾರಿಗೆ ಹೃದಯಾಘಾತದಿಂದ ನಿಧನರಾದರು.
ಅವರು ಪತ್ನಿ , ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಅವರ ಹಿರಿಯ ಪುತ್ರ ಕೃಷ್ಣಮೂರ್ತಿ ಪ್ರಭು ಆದಾಯ ತೆರಿಗೆ ಇಲಾಖೆಯ ನಿವ್ರತ್ತ ಅಧಿಕಾರಿ ಮತ್ತು 2 ನೇ ಪುತ್ರ ಬಿ.ಸದಾಶಿವ ಪ್ರಭು ಐಎಎಸ್ ವಿಜಯನಗರ ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅವರ ಅಂತ್ಯಕ್ರಿಯೆಯು ಎಳ್ಳಾರೆಯ ಬೆಂಬರಬೈಲಿನ ಅವರ ಸ್ವಗೃಹದಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.