ದಿನೇಶ್ ದೇವಾಡಿಗ ಕದ್ರಿ
Update: 2023-04-09 16:53 GMT
ಮಂಗಳೂರು: ರಾಜ್ಯ ದೇವಾಡಿಗರ ಸಂಘದ ಮಾಜಿ ಅಧ್ಯಕ್ಷರು ಮತ್ತು ಮಂಗಳ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ದಿನೇಶ್ ದೇವಾಡಿಗ ಕದ್ರಿ ಹೃದಯಘಾತದಿಂದ ರವಿವಾರ ನಿಧನರಾದರು.
ಕೊಡಗೈದಾನಿಯಾದ ಸರಳ ಸಜ್ಜನಿಕೆಯ ವ್ಯಕ್ತಿತ್ವದ ದಿನೇಶ್ ದೇವಾಡಿಗ ಶ್ರೀ ಕೃಷ್ಣ ಜನ್ಮಮಹೋತ್ಸವ ಸಮಿತಿಯ ಗೌರವಾಧ್ಯಕ್ಷ, ಕದ್ರಿ ಸರಕಾರಿ ಶಾಲೆಯ ಅಧ್ಯಕ್ಷರು, ಶ್ರೀ ಕ್ಷೇತ್ರ ಕದ್ರಿಯ ಮಾಜಿ ಮೊಕ್ತೇಸರರಾಗಿ ಹಾಗೂ ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.