ಎಂ ಶೇಖಬ್ಬ ನಿಧನ
Update: 2023-04-13 02:12 GMT
ಮಂಗಳೂರು: ಮುಹ್ಯುದ್ದೀನ್ ಜುಮಾ ಮಸೀದಿ ಮೂಲರಪಟ್ನಾ ಇದರ ಮಾಜಿ ಅಧ್ಯಕ್ಷರು ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದ ಸಾಮಾಜಿಕ ಧಾರ್ಮಿಕ ಹಿರಿಯ ನೇತಾರರಾದ ಹಾಜಿ ಎಂ ಶೇಖಬ್ಬ (88) ನಿಧನರಾಗಿದ್ದಾರೆ.
ಇವರು ಬದ್ರಿಯಾ ಜುಮಾ ಮಸೀದಿ ಮುತ್ತೂರು ಮಾರ್ಗದಂಗಡಿ ಗೌರವಾಧ್ಯಕ್ಷರಾಗಿ, ಕುಪ್ಪೆಪದವು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿ ಮತ್ತು ಮುತ್ತೂರು ನ್ಯಾಯ ಬೆಲೆ ಅಂಗಡಿಯ ಮ್ಹಾಲಕರಾಗಿ ಹಲವು ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ಮೃತರು ಅಬ್ದುಲ್ ಬಷೀರ್, ಅಬ್ದುಲ್ ಖಾದರ್, ಮುಹಮ್ಮದ್ ರಫೀಕ್ (ಆಕೊಲೈಟ್ ಸಿಂಥೆಟಿಕ್ ರೆಸಿನ್ಸ್), ಸಿದ್ದೀಕ್, ದಾರುನ್ನೂರ್ ಸಂಸ್ಥೆಯ ವ್ಯವಸ್ಥಾಪಕ ಅಬ್ದುಲ್ ಹಕೀಮ್, ಮೊಹಮದ್ ಶಾಲಿ ಸೇರಿದಂತೆ 6 ಪುತ್ರರು ಹಾಗೂ 5 ಪುತ್ರಿಯರು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮುತ್ತೂರು ಮಾರ್ಗದಂಗಡಿಯ ಹಿರಿಯ ವ್ಯಕ್ತಿಯಾಗಿದ್ದ ಇವರಿಗೆ 88 ವರ್ಷ ವಯಸ್ಸಾಗಿತ್ತು.