ಯಶವಂತ ಕುಮಾರ್

Update: 2023-05-03 15:31 GMT

ಮಂಗಳೂರು: ನಿವೃತ್ತ ಸಿವಿಲ್ ನ್ಯಾಯಾಧೀಶ  ಯಶವಂತ   ಕುಮಾರ್ ಬೋಳಾರ (75) ಬುಧವಾರ ಸಂಜೆ ಮಂಗಳೂರಿನಲ್ಲಿ ನಿಧನರಾದರು.

ವಾಣಿಜ್ಯ ತೆರಿಗೆ ಅಧಿಕಾರಿ ದಿ.ಎಂ.ನಾರಾಯಣ್ ಶ್ರೀಯಾನ್ ಅವರ ಹಿರಿಯ ಪುತ್ರರಾಗಿದ್ದ ಯಶವಂತ ಕುಮಾರ್  ಮಂಗಳೂರು, ಬೆಂಗಳೂರು, ತೀರ್ಥಹಳ್ಳಿ, ಹಿರಿಯೂರು, ಮುಂತಾದೆಡೆ ವಕೀಲರಾಗಿ, ಮುನ್ಸೀಫ್ ಹಾಗೂ ಸಿವಿಲ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು.

ಮಂಗಳೂರು ಕನ್ನಡ ಮೊಯ್ಲಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ, ಯುವಕ ಸಂಘದ ಸ್ಥಾಪಕರಾಗಿ ಸೇವೆ ಸಲ್ಲಿಸಿದ್ದರು.

ಅವರಿಗೆ ಪತ್ನಿ ಹಾಗೂ ನ್ಯಾಯವಾದಿಗಳಾದ ಪುತ್ರ ಬಿ.ಅಶೋಕ್ ಕುಮಾರ್ ಮತ್ತು ಪುತ್ರಿ ಬಿ. ಆಶಾಕಿರಣ್ ಇದ್ದಾರೆ.

Similar News

ಹರಿಶ್ಚಂದ್ರ
ವಿಮಲ ಭಟ್
ಕಮಲಾಕ್ಷ