ಶರೀಫ್ ಪಾತ್ರತೋಟ
Update: 2023-05-05 04:05 GMT
ವಿಟ್ಲ, ಮೇ 5: ಅನಾರೋಗ್ಯದಿಂದ ಬಳಲುತ್ತಿದ್ದ ಕೆಲಿಂಜ ಪಾತ್ರತೋಟ ನಿವಾಸಿ ಶರೀಫ್(34) ಗುರುವಾರ ತಡರಾತ್ರಿ ನಿಧನರಾಗಿದ್ದಾರೆ.
ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಶರೀಫ್ ಕುಟುಂಬಸ್ಥರ ಜೊತೆ ಜಾವಗಲ್ ದರ್ಗಾಕ್ಕೆ ತೆರಳಿದ್ದರು. ಬಳಿಕ ಹಿಂದಿರುಗುತ್ತಿದ್ದ ವೇಳೆ ತೀವ್ರವಾಗಿ ಅಸ್ವಸ್ಥಗೊಂಡರೆನ್ನಲಾಗಿದೆ. ತಕ್ಷಣ ಅವರನ್ನು ಅರಸೀಕೆರೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಶರೀಫ್ ರ ಮೃತದೇಹವನ್ನು ಕೆಲಿಂಜಕ್ಕೆ ತರಲಾಗುತ್ತಿದ್ದು, ಕೆಲಿಂಜ ಮಸೀದಿ ವಠಾರದಲ್ಲಿ ಧಪನ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.