ಗೋಪಾಲಕೃಷ್ಣ ನಾಯಕ್
Update: 2023-05-09 13:33 GMT
ಉಪ್ಪಿನಂಗಡಿ: ಮಂಡಲ ಪಂಚಾಯತ್ ಸದಸ್ಯ, ಪ್ರಗತಿಪರ ಕೃಷಿರಾಗಿದ್ದ ಗೋಪಾಲಕೃಷ್ಣ ನಾಯಕ್ ಪೋರೋಳಿ (67) ಅಲ್ಪ ಕಾಲದ ಅಸೌಖ್ಯದಿಂದ ಮೇ 9ರಂದು ಬೆಳಗ್ಗೆ ಬಜತ್ತೂರು ಗ್ರಾಮದ ಪೊರೋಳಿಯ ತನ್ನ ಸ್ವಗೃಹದಲ್ಲಿ ನಿಧನರಾದರು.
ಇವರು ಉಪ್ಪಿನಂಗಡಿ ಸಿಎ ಬ್ಯಾಂಕ್, ಪುತ್ತೂರಿನ ಸರಸ್ವತಿ ಕ್ರೆಡಿಟ್ ಸಹಕಾರಿ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೇ, ಬಿಜೆಪಿಯ ಸ್ಥಳೀಯ ಪದಾಧಿಕಾರಿಯಾಗಿಯೂ ಗುರುತಿಸಿಕೊಂಡಿದ್ದರು. ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.