ಸುಂದರ ಪೂಜಾರಿ ಎಲಿಯ
Update: 2023-05-22 15:29 GMT
ಉಪ್ಪಿನಂಗಡಿ: ಬಿಲ್ಲವ ಸಂಘ, ಯುವವಾಹಿನಿಯಲ್ಲಿ ಸಕ್ರೀಯರಾಗಿದ್ದ ಹಿರೇಬಂಡಾಡಿ ಗ್ರಾಮದ ಸುಂದರ ಪೂಜಾರಿ ಎಲಿಯ (67) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊದಿದ್ದಾರೆ.
ಪುತ್ತೂರು ಬಿಲ್ಲವ ಯುವ ಸಂಘ, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಪದಾಧಿಕಾರಿಯಾಗಿ, ಉಪ್ಪಿನಂಗಡಿ ಘಟಕದ ಅಧ್ಯಕ್ಷರಾಗಿ, ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಬ್ಯಾಂಕ್‍ನ ಉಪಾಧ್ಯಕ್ಷ ರಾಗಿ ಸೇರಿದಂತೆ ಹಲವು ಸಂಘ - ಸಂಸ್ಥೆಗಳಲ್ಲಿ ಇವರು ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಸುನಂದ, ಮಕ್ಕಳಾದ ದೀಪಕ್, ದೀಪಾ, ದೀಪ್ತಿ ಹಾಗೂ ದೀಕ್ಷಾರನ್ನು ಅಗಲಿದ್ದಾರೆ.