ಸಂತೆಕಟ್ಟೆ: ಶಾಸಕರಿಂದ ರಾ.ಹೆ.ಅಂಡರ್ ಪಾಸ್ ಕಾಮಗಾರಿ ಪರಿಶೀಲನೆ
ಉಡುಪಿ, ಜೂ.8: ಇಲ್ಲಿಗೆ ಸಮೀಪದ ಸಂತೆಕಟ್ಟೆಯಲ್ಲಿ ನಡೆದಿರುವ ರಾಷ್ಟ್ರೀಯ ಹೆದ್ದಾರಿ 66ರ ಅಂಡರ್‌ಪಾಸ್ ಕಾಮಗಾರಿಯನ್ನು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಇಂದು ಪರಿಶೀಲಿಸಿದರು.
ಅಲ್ಲದೇ ಅವರು ಉಪ್ಪೂರು ಕೊಳಲಗಿರಿ ಕ್ರಾಸ್, ಬ್ರಹ್ಮಾವರ ನೂತನ ತಾಲೂಕು ಸೌಧದ ಬಳಿ ಹಾಗೂ ಬಲಾಯಿಪಾದೆ ಕುತ್ಪಾಡಿ ಸಂಪರ್ಕ ರಸ್ತೆಯ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆಗಾಲ ಪ್ರಾರಂಭಗೊಳ್ಳುವ ಹಿನ್ನೆಲೆಯಲ್ಲಿ ಸುಗಮ ರಸ್ತೆ ಸಂಚಾರ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಸೂಕ್ತ ಕ್ರಮ ವಹಿಸುವಂತೆ ಶಾಸಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಕಾಮಗಾರಿ ನಡೆಸುತ್ತಿರುವ ಕಂಪೆನಿಯ ಪ್ರತಿನಿಧಿಗಳಿಗೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯೆ ಮಂಜುಳಾ ನಾಯಕ್, ಜಯಂತಿ, ಬಾಲಕೃಷ್ಣ ಶೆಟ್ಟಿ, ಕಲ್ಯಾಣ ಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೃಷ್ಣ ದೇವಾಡಿಗ, ಗ್ರಾಪಂ ಸದಸ್ಯ ಸತೀಶ್ ನಾಯ್ಕ್, ನವೀನ್ ಕಾಂಚನ್, ಉಮೇಶ್ ಬಡನಿಡಿಯೂರು, ಮುಖಂಡರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ ಉಮೇಶ್ ಶೆಟ್ಟಿ, ನಿಶಾನ್ ರೈ, ಜಯ ಬಲೈಪಾದೆ, ಸುನೀಲ್ ಉಪ್ಪೂರು ಮೊದಲಾದವರು ಉಪಸ್ಥಿತರಿದ್ದರು.