ಉಮ್ಮರಬ್ಬ

Update: 2023-06-09 16:49 GMT

ಕೊಣಾಜೆ: ಸಜಿಪಪಡು ತಲಮೊಗರು ನಿವಾಸಿ ಉಮ್ಮರಬ್ಬ (75) ಅಲ್ಪಕಾಲದ ಅಸೌಖ್ಯದಿಂದ  ಶುಕ್ರವಾರ ಸ್ವಗೃಹದಲ್ಲಿ  ನಿಧನ ಹೊಂದಿದರು.

ಪತ್ನಿ, ಕುರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಝುಬೇರ್ ತಲಮೊಗರು ಸೇರಿದಂತೆ ಇಬ್ಬರು ಪುತ್ರರು, ಐವರು ಪುತ್ರಿಯರನ್ನು ಅಗಲಿದ್ದಾರೆ.

ಬೀಡಿ ಗುತ್ತಿಗೆದಾರರಾಗಿದ್ದ ಇವರು ಸಾಮಾಜಿಕ, ಧಾರ್ಮಿಕವಾಗಿ ತೊಡಗಿಸಿಕೊಂಡಿದ್ದರು. ತಲಮೊಗರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾಗಿ ಮೂರು ಅವಧಿಗೆ ಕಾರ್ಯನಿರ್ವಹಿಸಿದ್ದ ಅವರು ಮಸೀದಿ ನವೀಕರಣದ ರುವಾರಿಗಳಲ್ಲಿ ಒಬ್ಬರಾಗಿದ್ದರು. ಸ್ಥಳೀಯ ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿದ್ದ ಅವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ಮೃತರ ನಿಧನಕ್ಕೆ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಸಂತಾಪ ವ್ಯಕ್ತಪಡಿಸಿದ್ದಾರೆ.

Similar News

ಹರಿಶ್ಚಂದ್ರ
ವಿಮಲ ಭಟ್
ಕಮಲಾಕ್ಷ