ಮಾನಸ್ ದೇವಾಡಿಗ
Update: 2023-06-16 13:55 GMT
ಮಂಗಳೂರು: ನಗರದ ಬಿಜೈ ನಿವಾಸಿ, ಫೋಟೋಗ್ರಾಫರ್ ಮಾನಸ್ ದೇವಾಡಿಗ (33) ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.
ಪತ್ನಿ, ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
ಬಿಜೈ ಆನೆಗುಂಡಿ ತ್ರಿಮೂರ್ತಿ ಸೇವಾ ಸಮಿತಿಯ ಕಾರ್ಯಕರ್ತ, ಆನೆಗುಂಡಿ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್‌ನ ಸದಸ್ಯರಾಗಿದ್ದರು.