ಮನೋಹರ ಕೆ.

Update: 2023-06-19 14:00 GMT

ಉಡುಪಿ, ಜೂ.19: ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿ ಮನೋಹರ ಕೆ.(68) ರವಿವಾರ  ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಅಸೌಖ್ಯದ ಕಾರಣ ಶನಿವಾರ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

1978ರಲ್ಲಿ ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರಿದ್ದ ಮನೋಹರ  2015ರಲ್ಲಿ ನಿವೃತ್ತರಾಗಿದ್ದರು. ತಮ್ಮ ಕರ್ತವ್ಯ ದಕ್ಷತೆಯಿಂದ ಮೇಲಧಿಕಾರಿಗಳ ವಿಶ್ವಾಸ ಶ್ಲಾಘನೆಗೆ ಪಾತ್ರರಾಗಿದ್ದರು. ಸಂಸ್ಕೃತಿ ಸಂಪನ್ನರಾದ ಅವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಕುತ್ಪಾಡಿ ರಾಮಕೃಷ್ಣ ಕಲಾಮಂಡಳಿ, ಸಿಂಡಿಕೇಟ್ ಬ್ಯಾಂಕ್‌ನ ರಿಕ್ರಿಯೇಶನ್ ಕ್ಲಬ್‌ಗಳಲ್ಲಿ ಪಾತ್ರಗಳನ್ನು ಮಾಡಿ ಮೆಚ್ಚುಗೆಗಳಿಸಿದ್ದರು. ನಿಡಂಬೂರು ಯುವಕ ಮಂಡಳದ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ ಆ ಸಂಸ್ಥೆಯ ಉತ್ಕರ್ಷಕ್ಕೆ ಕಾರಣರಾಗಿದ್ದರು. ನಿವೃತ್ತಿಯ ಅನಂತರ ಉಡುಪಿಯ ಸಾಮಾಜಿಕ -ಸಾಂಸ್ಕೃತಿಕ ಸಂಘಟನೆ ಯಕ್ಷಗಾನ ಕಲಾರಂಗದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 

ಮನೋಹರ್ ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಮತ್ತು ಕಾರ್ಯಕಾರಿ ಸಮಿತಿ ಗಾಢ ಸಂತಾಪ ವ್ಯಕ್ತಪಡಿಸಿದೆ.

Similar News

ಹರಿಶ್ಚಂದ್ರ
ವಿಮಲ ಭಟ್
ಕಮಲಾಕ್ಷ