ಬಾಗಲಕೋಟೆ | ಸ್ನಾನಕ್ಕೆ ತೆರಳಿದ್ದ ಮೂವರು ಬಾಲಕರು ನೀರುಪಾಲು

Update: 2025-03-30 22:07 IST
ಬಾಗಲಕೋಟೆ | ಸ್ನಾನಕ್ಕೆ ತೆರಳಿದ್ದ ಮೂವರು ಬಾಲಕರು ನೀರುಪಾಲು
  • whatsapp icon

ಬಾಗಲಕೋಟೆ: ಯುಗಾದಿ ಪಾಡ್ಯದ ನಿಮಿತ್ತ ಸ್ನಾನಕ್ಕೆ ತೆರಳಿದ್ದ ಮೂವರು ಬಾಲಕರು ನೀರುಪಲಾಗಿರುವ ಘಟನೆ ಆಲಮಟ್ಟಿ ಜಲಾಶಯದ ಮುಂಭಾಗದ ಕೃಷ್ಣಾ ನದಿಯಲ್ಲಿ ನಡೆದಿದೆ.

ನೀರುಪಾಲಾದವರನ್ನು ಬಾಗಲಕೋಟೆ ತಾಲೂಕಿನ ಇಲ್ಯಾಳ ಗ್ರಾಮದ ಸೋಮಶೇಖರ ಬೊಮ್ಮಣ್ಣ ದೇವರಮನಿ (15), ಮಲ್ಲಪ್ಪ ಬಸಪ್ಪ ಬಗಲಿ (15) ಹಾಗೂ ಪರನಗೌಡ ಮಲ್ಲಪ್ಪ ಬೀಳಗಿ (17) ನೀರು ಪಾಲಾದವರು ಎಂದು ತಿಳಿದುಬಂದಿದೆ.

ಘಟನೆ ನಡೆದ ತಕ್ಷಣ ಮೀನುಗಾರರು ಕಾಣೆಯಾದವರಿಗಾಗಿ ಹುಡುಕಾಟ ನಡೆಸಿ ಸೋಮಶೇಖರ ಬೊಮ್ಮಣ್ಣ ದೇವರಮನಿಯ ಮೃತದೇಹವನ್ನು ಹೊರತೆಗೆದಿದ್ದಾರೆ. ಇನ್ನಿಬ್ಬರ ಕಾಣೆಯಾದವರ ಹುಡುಕಾಟಕ್ಕಾಗಿ ಬಾಗಲಕೋಟೆಯ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿದ್ದು, ಶೋಧಕಾರ್ಯ ಮುಂದುವರಿದಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News