ಮಕ್ಕಳನ್ನು ಆಟದ ಮೈದಾನಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದರೆ ಸೃಜನಶೀಲತೆ ಹೆಚ್ಚುತ್ತದೆ: ಕೆ.ವಿ.ಪ್ರಭಾಕರ್

Update: 2025-02-09 22:48 IST
Photo of Program
  • whatsapp icon

ಬಾಗಲಕೋಟೆ : ಮಕ್ಕಳನ್ನು ಮೊಬೈಲ್‍ಗೆ, ಟಿವಿಗೆ ಅಂಟಿಸುವ ಬದಲಿಗೆ ಪುಸ್ತಕಗಳಿಗೆ, ಮಣ್ಣಿನಲ್ಲಿ ಆಡಲು, ಆಟದ ಮೈದಾನಗಳಿಗೆ ತೊಡಗಿಸಿದರೆ ಮಕ್ಕಳ ಸೃಜನಶೀಲತೆ, ಕ್ರಿಯಾಶೀಲತೆ ಹೆಚ್ಚುತ್ತದೆ ಎಂದು ಸಿಎಂ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ ನೀಡಿದರು.

ರವಿವಾರ ಜಿಲ್ಲೆಯ ಹೊಳೆ ಹುಚ್ಚೇಶ್ವರ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಶಾಲೆಗಳ ವಾರ್ಷಿಕ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಗಡಿಯಲ್ಲಿ ಸಿಗುವ ಪ್ಲಾಸ್ಟಿಕ್ ಆಟದ ವಸ್ತುಗಳಿಗೆ ಮಕ್ಕಳು ಅಂಟಿಕೊಂಡರೆ ಮಕ್ಕಳಲ್ಲಿ ಸೃಜನಶೀಲತೆ ಸತ್ತು ಹೋಗುತ್ತದೆ. ಮಕ್ಕಳು ತಮ್ಮ ಆಟದ ವಸ್ತುವನ್ನು ತಾವೇ ಸೃಷ್ಟಿಸಿಕೊಳ್ಳುವುದರಿಂದ ಸೃಜನಶೀಲತೆ ಚಿಗುರುತ್ತದೆ ಎಂದರು.

ಸಮಾಜದಿಂದ ಬಂದಿದ್ದು ವಾಪಾಸ್ ಸಮಾಜಕ್ಕೆ ಹಂಚುವ ಕನಸು ಕಟ್ಟಿಕೊಂಡು ಹೊಳೆ ಹುಚ್ಚೇಶ್ವರ ಸಂಸ್ಥೆ ಕ್ರಿಯಾಶೀಲವಾಗಿ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಶ್ರಮಿಸುತ್ತಿದೆ ಎಂದ ಅವರು, ಸಿಎಂ ಸಿದ್ದರಾಮಯ್ಯ ಅವರನ್ನು ಅಪಾರವಾಗಿ ಪ್ರೀತಿಸುವ, ಬೆಂಬಲಿಸುವ ಶರಣರ ಜಿಲ್ಲೆ ಬಾಗಲಕೋಟೆ ಅಂದರೆ ನನಗೆ ಅತೀವ ಪ್ರೀತಿ. ಈ ಜಿಲ್ಲೆಯ ಹೊಳೆ ಹುಚ್ಚೇಶ್ವರ ಸಂಸ್ಥೆ ಅನ್ನ-ಅಕ್ಷರ ದಾಸೋಹದಲ್ಲಿ ಅಪಾರ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.

ಈಗ ಶಿಕ್ಷಣದ ಸವಾಲು ಮತ್ತು ಸಾಧ್ಯತೆಗಳು ಅಪಾರ ಮರ್ಪಾಡು ಹೊಂದಿವೆ. ತಂತ್ರಜ್ಞಾನ ಮತ್ತು ಕೃತಕ ಬುದ್ದಿಮತ್ತೆಯ ಬೆಳವಣಿಗೆ ಜ್ಞಾನದ ಹೊಳೆಯನ್ನೆ ಹರಿಸುತ್ತಿದೆ. ಇಂತಹ ಸವಾಲಿನ ಹೊತ್ತಲ್ಲಿ ಮಕ್ಕಳಿಗೆ ಹೆಚ್ಚೆಚ್ಚು ಕ್ರಿಯಾಶೀಲ ಮತ್ತು ಮಾನವೀಯ ನೆಲೆಯ ಶಿಕ್ಷಣ ಒದಗಿಸಬೇಕಿದೆ. ಈ ದಿಕ್ಕಿನಲ್ಲಿ ಈ ಸಂಸ್ಥೆ ಶ್ರಮಿಸಲಿ ಎಂದು ಅವರು ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News