ನನ್ನ ವಿರುದ್ಧ ಸುಳ್ಳು ರೇಪ್ ಕೇಸ್ ಹಾಕಲಾಗಿದೆ : ಮುನಿರತ್ನ

Update: 2024-12-27 15:25 GMT

ಮುನಿರತ್ನ

ಬೆಂಗಳೂರು : ನನ್ನ ವಿರುದ್ಧ ಸುಳ್ಳು ರೇಪ್ ಕೇಸ್ ಹಾಕಲಾಗಿದೆ. ನಾನು ಆದಿಚುಂಚನಗಿರಿಯ ಕಾಲಭೈರವ ದೇವಸ್ಥಾನಕ್ಕೆ ಹೋಗುತ್ತೇನೆ. ಕುಸುಮಾ ಹನುಮಂತರಾಯಪ್ಪ ಅವರೂ ಬರಲಿ. ರೇಪ್ ಕೇಸ್ ಕೊಟ್ಟವರು ಅವರಿಗೆ ಪರಿಚಯವೇ ಇಲ್ಲವೆಂದು ದೇವರ ಎದುರೇ ಪ್ರಮಾಣ ಮಾಡಲಿ ಎಂದು ಮಾಜಿ ಸಚಿವ ಹಾಗೂ ಶಾಸಕ ಮುನಿರತ್ನ ಸವಾಲು ಹಾಕಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಸುಳ್ಳು ಅತ್ಯಾಚಾರ ದೂರು ದಾಖಲಿಸಿರುವ ಹಿಂದೆ ರಾಜರಾಜೇಶ್ವರಿ ನಗರ ಕಾಂಗ್ರೆಸ್‍ನ ಪರಾಜಿತೆ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರ ಕೈವಾಡವಿದೆ ಎಂದರು.

ಕುಸುಮಾ ಹನುಮಂತರಾಯಪ್ಪ ಅವರು ಬುದ್ದಿವಂತರು, ವಿದ್ಯಾವಂತರು ಕೆಳಮಟ್ಟದ ರಾಜಕಾರಣ ಮಾಡಬಾರದು. ಆರ್.ಆರ್.ನಗರ ಕ್ಷೇತ್ರದಲ್ಲಿ ಕೆಲಸ ಮಾಡಲು ಸಹಾಯ ಮಾಡಬೇಕು. ಅದನ್ನು ಬಿಟ್ಟು ಸುಖಾಸುಮ್ಮನೆ ಅಪಪ್ರಚಾರ ಮಾಡಬೇಡಿ ಎಂದು ಮುನಿರತ್ನ ಕಿಡಿಕಾರಿದರು.

ನ್ಯಾಯಾಲಯದಲ್ಲಿ ಪ್ರಕರಣವಿದ್ದ ಮಾತ್ರಕ್ಕೆ ಒಬ್ಬ ಶಾಸಕ ಕ್ಷೇತ್ರದಲ್ಲಿ ಬರಬಾರದೆಂದು ಕೆಲವರು ಮಾತನಾಡುತ್ತಿರುವುದು ಸರಿಯಲ್ಲ. ನ್ಯಾಯಾಲಯದಲ್ಲಿ ಪ್ರಕರಣ ತೀರ್ಮಾನವಾಗುತ್ತದೆ, ಅದಕ್ಕೆ ನಾವು ಬದ್ಧವಾಗಿರಬೇಕು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಈ ಹಿಂದೆ ತಿಹಾರ್ ಜೈಲಿನಲ್ಲಿ ಇದ್ದವರು. ಅವರು ಅವರ ಕ್ಷೇತ್ರಕ್ಕೆ ಹೋಗುತ್ತಿದ್ದಾರೆ. ಹೀಗಿದ್ದಾಗ ನಾನು ಕ್ಷೇತ್ರಕ್ಕೆ ಹೋಗುವಂತಿಲ್ಲ ಅನ್ನುವುದು ಎಷ್ಟುಸರಿ ಎಂದು ಮುನಿರತ್ನ ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News