ಗೃಹಲಕ್ಷಿ ಯೋಜನೆಯ ಹಣದಿಂದ ಮಗನಿಗೆ ಬೈಕ್‌ ಬುಕ್‌ ಮಾಡಿದ ತಾಯಿ

Update: 2024-10-11 07:11 GMT

ಬೆಳಗಾವಿ: ಗೃಹಲಕ್ಷಿ ಯೋಜನೆಯ ಮೂಲಕ ದೊರೆತ ಹಣದಿಂದ ಮಹಿಳೆಯೊಬ್ಬರು ತನ್ನ ಮಗನಿಗೆ ಬೈಕ್‌ ಬುಕ್ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ನಡೆದಿದೆ.

ಕೌಜಲಗಿ ಗ್ರಾಮದ ಬಾಗವ್ವಾ ಸಣ್ಣಕ್ಕಿ ಎಂಬ ಮಹಿಳೆ, ಪುತ್ರನಿಗೆ ಬೈಕ್ ಖರೀದಿಸಲು ಕೂಡಿಟ್ಟಿದ್ದ ಗೃಹ ಲಕ್ಷ್ಮಿ ಹಣವನ್ನು ಡೌನ್​ ಪೇಮೆಂಟ್ ಆಗಿ ಕಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಮಹಾನವಮಿ ಹಬ್ಬದಂದು ದ್ವಿಚಕ್ರ ವಾಹನ ಕೊಳ್ಳಲು ಮುಂದಾಗಿರುವ ಮಗನಿಗೆ ತಾಯಿ ಗೃಹಲಕ್ಷ್ಮೀ ಹಣ ನೀಡಿರುವ ವಿಷಯ ಕೇಳಿ ಖುಷಿಯಾಗಿದೆ ಎಂದು ತಾಯಿ -ಮಗನಿಗೆ  ಶುಭ ಹಾರೈಸಿದ್ದಾರೆ.

'ಗೃಹಲಕ್ಷಿ' ಯೋಜನೆಯ ಹಣ ಇಂದು ಹಲವಾರು ಮಹಿಳೆಯರ ಜೀವನದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಮೇ ತಿಂಗಳಲ್ಲಿ ರಾಮದುರ್ಗದ ಮನಿಹಾಳ ಗ್ರಾಮದ ಸಕ್ಕುಬಾಯಿ ಈರಣ್ಣ ಕರದಿನ ಅವರು 'ಗೃಹಲಕ್ಷಿ' ಯೋಜನೆಯ ಹಣದಿಂದ ತಮ್ಮ ಕಣ್ಣಿ ಶಸ್ತ್ರಕ್ರಿಯೆ ಮಾಡಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News