ಸವದತ್ತಿ | ಹೋಟೆಲ್ನಲ್ಲಿ ಕುಕ್ಕರ್ ಸ್ಫೋಟ : 15 ಮಂದಿಗೆ ಗಾಯ
Update: 2024-08-13 12:14 GMT
ಬೆಳಗಾವಿ: ಹೋಟೆಲ್ನಲ್ಲಿ ಕುಕ್ಕರ್ ಸ್ಫೋಟಗೊಂಡು 15 ಜನರಿಗೆ ಗಾಯವಾದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಯಾತ್ರಾ ಸ್ಥಳ ಯಲ್ಲಮ್ಮನಗುಡ್ಡದ ಹೋಟೆಲ್ ವೊಂದರಲ್ಲಿ ಕುಕ್ಕರ್ ಸ್ಫೋಟವಾಗಿದ್ದು, ಘಟನೆಯಲ್ಲಿ ಹೋಟೆಲ್‌ನಲ್ಲಿದ್ದ ಸಿಬ್ಬಂದಿ ಹಾಗೂ ಗ್ರಾಹಕರೂ ಸೇರಿದಂತೆ 15 ಜನರಿಗೆ ಸುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.