ಚಾಮರಾಜನಗರ: ವಿಷಪೂರಿತ ಸೊಪ್ಪು ತಿಂದ 12 ಮೇಕೆಗಳು ಸಾವು

Update: 2024-09-22 14:08 GMT

ಚಾಮರಾಜನಗರ: ವಿಷಪೂರಿತ ಸೊಪ್ಪು ಮೇಯ್ದ ಮೇಕೆ ಗುಂಪಿನಲ್ಲಿ 12 ಮೇಕೆಗಳು ಸಾವನ್ನಪ್ಪಿದ್ದು, ಕುರಿಗಾಹಿಗಳು ಆತಂಕದಲ್ಲಿ ಇದ್ದಾರೆ. ಮೇಯಿಸಲು ಹೊಡೆದುಕೊಂಡು ಹೋಗಿದ್ದ 50 ಮೇಕೆಗಳ ಪೈಕಿ ಸಂಜೆ ಮನೆಯತ್ತ ಬರುವಾಗ 12 ಮೇಕೆಗಳು ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಟಗರಪುರ ಮೋಳೆ ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಟಗರಪುರ ಗ್ರಾಮದ ಸೊಮ್ಮಣ್ಣ ಹಾಗೂ ಶಾರದ ಎಂಬವರು ತಮ್ಮ ಜೀವನೋಪಾಯಕ್ಕೆ ಮೇಕೆ ಸಾಕಾಣಿಕೆ ಮಾಡುತ್ತಿದ್ದರು. ರವಿವಾರ ಮೇಕೆಗಳನ್ನು ಮೇಯಿಸಲು ತೆರಳಿದಾಗ, ವಿಷಪೂರಿತ ಸೊಪ್ಪು ತಿಂದ ಮೇಕೆಗಳು ಒಂದಾದ ಒಂದರಂತೆ ಸಾವನ್ನಪ್ಪಿದ್ದು ಮೇಕೆ ಸಾಕಿದವರಿಗೆ ಆತಂಕವಾಗಿದೆ.

ಸುಮಾರು 2 ಲಕ್ಷ ರೂ. ಮೌಲ್ಯದ 12 ಮೇಕೆಗಳು ಸಾವನ್ನಪ್ಪಿರುವ ಜೊತೆಗೆ ಇನ್ನೂ ಮೂರಿ ಮರಿಗಳು ಕೂಡ ಚಿಂತಾಜನಕವಾಗಿದೆ.

ಈ ಘಟನೆಯಿಂದ ಆತಂಕದಲ್ಲಿ ಇರುವ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸಂಬಂಧಪಟ್ಟ ಇಲಾಖೆಯವರಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News