ಚಾಮರಾಜನಗರ: ಜೂನಿಯರ್ ಭೋಗೇಶ್ವರ ಖ್ಯಾತಿಯ ಆನೆ ಸಾವು
Update: 2024-11-05 02:56 GMT
ಚಾಮರಾಜನಗರ: ಜೂನಿಯರ್ ಬೋಗೇಶ್ವರ ಎಂದು ಖ್ಯಾತಿ ಪಡೆದಿದ್ದ, ಉದ್ದದ ಕೊಂಬು ಹೊಂದಿರುವ ಕಾಡಾನೆ ಸ್ವಾಭಾವಿಕವಾಗಿ ಮೃತ ಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ವ್ಯಾಪ್ತಿಯ ಬಾವಿಯಾಣೆ ಶಾಖೆಯ ಕಡಿತಾಳಕಟ್ಟೆ ಹಳ್ಳ ಕಾಡಿನಲ್ಲಿ ಜೂನಿಯರ್ ಬೋಗೇಶ್ವರ ಎಂದೇ ಖ್ಯಾತಿ ಪಡೆದಿದ್ದ 55 ವರ್ಷದ ಕಾಡಾನೆ ಮೃತಪಟ್ಟಿದೆ.
ಕಾಡಾನೆ ಮೃತ ಸ್ಥಳಕ್ಕೆ ಬಿಳಿಗಿರಿಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯಾಧಿಕಾರಿ ಶ್ರೀಪತಿ, ಸಹಾಯಕ ಅರಣ್ಯಾಧಿಕಾರಿ ಪ್ರಕಾಶ್ಕರ್ ಅಕ್ಷಯ್ ಅಶೋಕ್ , ಮಾಜಿ ರಾಜ್ಯ ಅರಣ್ಯ ಮಂಡಲಿ ಸದಸ್ಯ ಮಲ್ಲೇಶಪ್ಪ, ವಲಯ ಅರಣ್ಯಾಧಿಕಾರಿ ನಾಗೇಂದ್ರ ನಾಯಕ್, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪಶು ವೈದ್ಯಾಧಿಕಾರಿ ಡಾ. ಮಿರ್ಜಾ ವಸೀಂ ಬೇಟಿ ನೀಡಿ ಪರಿಶೀಲಿಸಿ ಪಂಚನಾಮೆ ನಡೆಸಿ ಕಾನೂನಿನ್ವಯ ಅಂತ್ಯಕ್ರಿಯೆ ನಡೆಸಿದರು.