ಚಾಮರಾಜನಗರ : ಸಾರಿಗೆ ಸೌಕರ್ಯವಿಲ್ಲದೆ ಜೋಳಿಗೆ ಮೂಲಕ ಆಸ್ಪತ್ರೆಗೆ ದಾಖಲಾದ ವೃದ್ಧೆ

Update: 2025-03-07 08:15 IST
ಚಾಮರಾಜನಗರ : ಸಾರಿಗೆ ಸೌಕರ್ಯವಿಲ್ಲದೆ ಜೋಳಿಗೆ ಮೂಲಕ ಆಸ್ಪತ್ರೆಗೆ ದಾಖಲಾದ ವೃದ್ಧೆ
  • whatsapp icon

ಚಾಮರಾಜನಗರ : ಕರ್ನಾಟಕ ಗಡಿ ಭಾಗವಾಗಿರುವ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಕಾಡಂಚಿನಲ್ಲಿರುವ ಇಂಡಿಗನತ್ತ ಗ್ರಾಮದಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದೆ ಆಸ್ಪತ್ರೆಗೆ ರವಾನಿಸಲು ಗ್ರಾಮಸ್ಥರು ಡೋಲಿಗೆ ಮೊರೆ ಹೋದಂತಹ ಘಟನೆ ವರದಿಯಾಗಿದೆ.

 ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡಸಲನತ್ತ ಗ್ರಾಮದ 80 ವರ್ಷದ ದುಂಡಮ್ಮ ಎಂಬುವವರು ಇಂಡಿಗನತ್ತ ಗ್ರಾಮದ ವಾಸವಾಗಿರುವ ಹಿರಿಯ ಪುತ್ರ ಮಾದೇಗೌಡ ರವರ ಮನೆಯಲ್ಲಿ ವಾಸವಿದ್ದು. ದಿಢೀರ್ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಗ್ರಾಮಸ್ಥರ ನೆರವಿನಿಂದ ಡೋಲಿಯ ಮುಖಾಂತರ ಮಲೆಮಹದೇಶ್ವರ ಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.

ನಂತರ ಚಿಕಿತ್ಸೆ ಪಡೆದ ದುಂಡಮ್ಮ ಪಡಸಲನತ್ತ ಗ್ರಾಮದಲ್ಲಿರುವ ಕಿರಿಯ ಪುತ್ರ ಪುಟ್ಟಸ್ವಾಮಿಗೌಡರ ಮನೆಗೆ ತೆರಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News