ಚಾಮರಾಜನಗರ: ಗಾಳಿ ಮಳೆಗೆ ಧರಾಶಾಹಿಯಾದ ಬಿದಿರಿನ ಮರಗಳು
Update: 2024-04-23 05:46 GMT
ಚಾಮರಾಜನಗರ: ಭಾರೀ ಮಳೆಗೆ ಬಿದಿರಿನ ಮರಗಳು ಬುಡಸಮೇತ ಕಿತ್ತು ರಸ್ತೆಗುರುಳಿದ ಘಟನೆ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಹಾಸನೂರಿನ ಕಾರ್ಯಪಾಳ್ಯಂ ಚಕ್ ಪೋಸ್ಟ್ ಬಳಿ ನಡೆದಿದೆ.
ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ಹಾಸನೂರು ಪ್ರದೇಶದಲ್ಲಿ ಭಾರೀ ಗಾಳಿ ಮಳೆ ಸುರಿದಿದ್ದು, ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯ ಬಿದಿರು ಮರಗಳು ಮುರಿದು ಬಿದ್ದಿದೆ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ 2 ಗಂಟೆಗಳ ಕಾಲ ಸಂಚಾರ ಬಂದ್ ಆಗಿತ್ತು.
ಮಾಹಿತಿ ತಿಳಿದು ಘಟನೆ ಸ್ಥಳಕ್ಕೆ ಬಂದ ತಮಿಳುನಾಡಿನ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಅರಣ್ಯ ಸಿಬ್ಬಂದಿ ರಸ್ತೆಯಲ್ಲಿ ಬಿದ್ದ ಬಿದಿರು ಮರಗಳನ್ನು ತೆರವುಗೊಳಿಸಿ, ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.