ಚಾಮರಾಜನಗರ: ಭಾರಿ ಗಾಳಿ ಮಳೆ; ಹಲವೆಡೆ ಹಾನಿ, ಜನಜೀವನ ಅಸ್ತವ್ಯಸ್ತ

Update: 2024-05-04 05:02 GMT

ಚಾಮರಾಜನಗರ : ಜಿಲ್ಲೆಯಲ್ಲಿ ಶುಕ್ರವಾರ ಭಾರಿ ಮಳೆಯಾಗಿದ್ದು, ಹಲವೆಡೆ ಅಪಾರ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಹನೂರು ತಾಲ್ಲೂಕಿನ ಮರಿ ಮಂಗಲ ಗ್ರಾಮದಲ್ಲಿರುವ ಕ್ರೈಸ್ತ ಧರ್ಮದ ಚರ್ಚ್ ಮುಂಭಾಗದಲ್ಲಿ ಇರಿಸಲಾಗಿದ್ದ ಏಸು ಕ್ರೈಸ್ತನ ಮೂರ್ತಿಯು ಗಾಳಿ ಮಳೆಯ ರಭಸಕ್ಕೆ ಧರೆಗುರುಳಿದೆ. ಹಲವಾರು ಶೆಡ್ ಗಳು ನಾಶವಾಗಿದ್ದು, ಜನರು ವಾಸಿಸಲು ಪರದಾಡುವಂತಾಗಿದೆ. ಇದರ ನಡುವೆ ತೇಗದ ಮರಗಳು ಧರಾಶಾಹಿಯಾಗಿದ್ದು, ಅದೃಷ್ಟವಷಾತ್ ಯಾವುದೇ ಪ್ರಾಣಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

ಹನೂರು ತಾಲ್ಲೂಕು ಆಡಳಿತಾಧಿಕಾರಿಗಳು ಗ್ರಾಮಕ್ಕೆ ಭೇಟಿ ಕೊಟ್ಟು ಮಳೆ ಗಾಳಿಯಿಂದ ಆಶ್ರಯ ಕಳೆದುಕೊಂಡಿರುವವರಿಗೆ ಪ್ರಕೃತಿ ವಿಕೋಪದಡಿ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕರ್ನಾಟಕ ತಮಿಳುನಾಡು ಮತ್ತು ಕೇರಳ ಗಡಿಭಾಗವಾದ ಗುಂಡ್ಲುಪೇಟೆ ಪಟ್ಟಣದ ಜನತಾ ಕಾಲೋನಿಯಲ್ಲಿ ಮರ ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದು ವಾಹನ ಸಂಚಾರ ಮತ್ತು ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗಿದ್ದಲ್ಲದೇ ವಿದ್ಯುತ್ ಸಂಪರ್ಕ ಕೂಡಾ ಕಡಿತಗೊಂಡಿತ್ತು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News