ಚಾಮರಾಜನಗರ | ಧಾರಾಕಾರ ಮಳೆಗೆ ಮನೆ ಕುಸಿತ: ಜಾನುವಾರು ಸಾವು
Update: 2024-12-04 04:43 GMT
ಚಾಮರಾಜನಗರ: ಫೆಂಗಲ್ ಚಂಡ ಮಾರುತದ ಪ್ರಭಾವ ಚಾಮರಾಜನಗರ ಜಿಲ್ಲೆಯ ಮೇಲೂ ಆಗಿದೆ. ಜಿಲ್ಲಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದೆ. ಈ ನಡುವೆ ಹನೂರು ತಾಲ್ಲೂಕಿನ ಪೊನ್ನಾಚಿ ಬಳಿ ಮನೆಯೊಂದು ಕುಸಿದಿದ್ದು, ಜಾನುವಾರು ಸಾವನ್ನಪ್ಪಿದೆ.
ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯತ್ ಪರಿಮಿತಿಯ ಗೇರಟ್ಟಿ ಗ್ರಾಮದಲ್ಲಿ ನಾಗಮಾದಪ್ಪ ಎಂಬವರ ಮನೆ ಕುಸಿದಿದ್ದು, ಅಲ್ಲಿದ್ದ ಜಾನುವಾರು ಸಾವನ್ನಪ್ಪಿದೆ.
ಕಡು ಬಡತನದಲ್ಲಿ ಜೀವನ ಸಾಗಿಸುವ ನಾಗಮಾದಪ್ಪರಿಗೆ ಇದೀಗ ದಿಕ್ಕು ತೋಚದಂತಾಗಿದ್ದು, ಕೈಕೊಟ್ಟ ಬೆಳೆಯಿಂದ ಈಗಾಗಲೇ ಕಂಗಲಾಗಿರುವ ನಾಗಮಾದಪ್ಪರವರಿಗೆ ಮನೆ ಕುಸಿತಗೊಂಡು ಜಾನುವಾರು ಸಾವನ್ನಪ್ಪಿದ್ದರಿಂದ ಮುಂದಿನ ಜೀವನ ಹೇಗೆಂದು ಪರಿತಪಿಸುತ್ತಿದ್ದಾರೆ.