ಚಾಮರಾಜನಗರ: ಆಟೋ- ಸ್ಕೂಟರ್ ಢಿಕ್ಕಿ; ವಿದ್ಯಾರ್ಥಿ ಮೃತ್ಯು
Update: 2024-11-29 04:26 GMT
ಚಾಮರಾಜನಗರ : ಶಾಲಾ ಮಕ್ಕಳು ಇರುವ ಆಟೋ ಮತ್ತು ಸ್ಕೂಟಿ ನಡುವೆ ರಸ್ತೆ ಅಪಘಾತವಾಗಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಹನೂರು ತಾಲ್ಲೂಕಿನ ಕಾಮಗೆರೆ ಸಮೀಪ ನಡೆದಿದೆ.
ಹನೂರು ತಾಲ್ಲೂಕಿನ ಮಂಗಲ ಗ್ರಾಮದ ವಿಮಲ್ ರಾಜ್ (10) ಮೃತ ವಿದ್ಯಾರ್ಥಿ. ಕಾಮಗೆರೆ ಗ್ರಾಮದ ಸೆಂಟ್ ಕ್ಲೇವಿಯರ್ ಶಾಲೆಗೆ 5 ನೇ ತರಗತಿ ವಿದ್ಯಾರ್ಥಿಯಾಗಿದ್ದ ಬಾಲಕ ಆಟೋದಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಅಪಘಾತ ನಡೆದು ಆಟೋ ಪಲ್ಟಿಯಾಗಿಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.