ಚಾಮರಾಜನಗರ : ನಡು ರಾತ್ರಿ ಕೊಳ್ಳೇಗಾಲ ಪಟ್ಟಣದಲ್ಲಿ ಕಾಡಾನೆ ಸಂಚಾರ
Update: 2024-12-06 09:11 GMT
ಚಾಮರಾಜನಗರ : ಕಾಡಿನಲ್ಲಿರಬೇಕಾದ ಕಾಡಾನೆಗಳು ಇದೀಗ ನಾಡಿಗೆ ಬರತೊಡಗಿದೆ. ಕೊಳ್ಳೇಗಾಲ ಪಟ್ಟಣದಲ್ಲಿ ಕಾಡಾನೆಗಳು ಸಂಚಾರ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕೊಳ್ಳೇಗಾಲ ಪಟ್ಟಣದ ಡಾ. ರಾಜ್ ಕುಮಾರ್ ರಸ್ತೆ ವೃತ್ತದ ಬಳಿ ರಸ್ತೆಯಲ್ಲಿ ನಡೆದು ಬಂದ ಕಾಡಾನೆಗಳು ಪೆಟ್ರೋಲ್ ಬಂಕ್ ಒಳಗೆ ಬಂದು ಸುತ್ತಾಡಿರುವ ದೃಶ್ಯ ಪೆಟ್ರೋಲ್ ಬಂಕ್ ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶುಕ್ರವಾರ ತಡರಾತ್ರಿ ಸುಮಾರು ಒಂದೂವರೆ ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಆನೆ ಬರುವುದನ್ನು ಕಂಡ ಪೆಟ್ರೋಲ್ ಬಂಕ್ ನ ಸಿಬ್ಬಂದಿಯೊಬ್ಬರು ಹೆದರಿ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ.
ಇದೀಗ ಕಾಡಾನೆ ಸೆರೆಗೆ ಅರಣ್ಯ ಇಲಾಖೆಯವರು ಹುಡುಕಾಟ ನಡೆಸುತ್ತಿದ್ದಾರೆ.