ಚಿಕ್ಕಮಗಳೂರು | ಬೈಕ್‍ನಲ್ಲಿ ಫೆಲೆಸ್ತೀನ್ ಧ್ವಜ ಹಿಡಿದು ಸಂಚರಿಸಿದ ಯುವಕರು : ಪೊಲೀಸರಿಗೆ ದೂರು

Update: 2024-09-15 14:23 GMT

ಚಿಕ್ಕಮಗಳೂರು : ಫೆಲೆಸ್ತೀನ್ ದೇಶದ ಧ್ವಜ ಹಿಡಿದು ನಗರದ ಪ್ರಮುಖ ರಸ್ತೆಗಳಲ್ಲಿ ಯುವಕರಿಬ್ಬರು ಸಂಚರಿಸಿದ ಘಟನೆ ನಡೆದಿದೆ. ಧ್ವಜ ಹಿಡಿದು ಬೈಕ್‍ನಲ್ಲಿ ಚಿಕ್ಕಮಗಳೂರು ನಗರದಾದ್ಯಂತ ಸಂಚರಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂಘಪರಿವಾರ ಆಗ್ರಹಿಸಿದೆ.

ರವಿವಾರ ನಗರದ ಕೆ.ಎಂ.ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್‍ನಲ್ಲಿ ಇಬ್ಬರು ಯುವಕರು ಫೆಲೆಸ್ತೀನ್ ಧ್ವಜ ಹಿಡಿದು ಸಂಚರಿಸಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಫೆಲೆಸ್ತೀನ್ ಧ್ವಜ ಹಿಡಿದು ನಗರದಲ್ಲಿ ಸುತ್ತಾಡಿದ ಯುವಕರನ್ನು ಬಂಧಿಸುವಂತೆ ಸಂಘಪರಿವಾರದ ಮುಖಂಡರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಕ್ರಮಕ್ಕೆ ಆಗ್ರಹಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News