ಚಿಕ್ಕಮಗಳೂರು: ಬೀದಿ ನಾಯಿ ದಾಳಿ; ಬಾಲಕಿಗೆ ಗಂಭೀರ ಗಾಯ
Update: 2024-12-21 16:40 GMT
ಚಿಕ್ಕಮಗಳೂರು: ಐದು ವರ್ಷದ ಮಗುವಿನ ಮೇಲೆ ಬೀದಿನಾಯಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿಯಲ್ಲಿ ನಡೆದಿದೆ.
ಐದು ವರ್ಷದ ಮಗು ಏಂಜಲಿನ ಮೇಲೆ ಬೀದಿನಾಯಿ ದಾಳಿಗೆ ಒಳಗಾಗಿದ್ದು, ಬಾಲಕಿಗೆ ಗಂಭೀರ ಗಾಯವಾಗಿದೆ. ಗಾಯಾಳು ಮಗುವನ್ನು ಶಿವಮೊಗ್ಗ ನಗರದ ಸರ್ಜಿ ಆಸ್ಪತ್ರಗೆ ದಾಖಲು ಮಾಡಲಾಗಿದೆ.
ಬೀದಿ ನಾಯಿ ದಾಳಿಯಿಂದ ಮಗುವಿನ ತುಟಿಯೇ ಕಿತ್ತು ಬಂದಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ಸ್ಥಳೀಯ ಆಡಳಿತದ ವಿರುದ್ಧ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.