ಮೂಡಿಗೆರೆ | ಬಾಗಿಲು ತೆರೆದರೆ ಮನೆಮುಂದೆ ನಿಂತಿತ್ತು ಒಂಟಿ ಸಲಗ!

Update: 2025-04-17 19:12 IST
ಮೂಡಿಗೆರೆ | ಬಾಗಿಲು ತೆರೆದರೆ ಮನೆಮುಂದೆ ನಿಂತಿತ್ತು ಒಂಟಿ ಸಲಗ!
  • whatsapp icon

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆ ಹಾವಳಿ ಮಿತಿ ಮೀರುತ್ತಿದ್ದು, ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದಲ್ಲಿ ಮನೆಯೊಂದರ ಬಾಗಿಲಿನ ಬಳಿ ಕಾಡಾನೆ ಆಗಮಿಸಿದ್ದು, ಮನೆಯಲ್ಲಿದ್ದವರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದಾರದಹಳ್ಳಿ ಗ್ರಾಮದ ನಿವಾಸಿ ಯಶವಂತ್ ಎಂಬವರ ಮನೆ ಬಾಗಿಲಿಗೆ ಬಂದ ಒಂಟಿ ಸಲಗ ಕಂಡು ಮನೆ ಮಂದಿ ಕ್ಷಣ ಕಾಲ ಆತಂಕಕ್ಕೆ ಒಳಗಾಗಿದ್ದಾರೆ. ಅಂಗಳದಲ್ಲಿ ಕಾಣಿಸಿದ ಆನೆ ಕ್ರಮೇಣ ಮನೆ ಬಾಗಿಲವರೆಗೂ ಬಂದು ಹಿಂತಿರುಗಿದೆ.

ಆನೆ ಬಂದ ದೃಶ್ಯವನ್ನು ಹೆದರುತ್ತಲೇ ಮನೆ ಮಾಲೀಕ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

ಆನೆಗಳ ಆವಾಸ ಸ್ಥಾನದಲ್ಲಿ ಕೃಷಿ ಸಾಗುವಳಿ ಮಾಡಿಕೊಂಡು ಮನೆಗಳನ್ನು ಕಟ್ಟಿಕೊಳ್ಳುತ್ತಿರುವುದರ ಜೊತೆಗೆ ಆನೆಗೆ ಅಗತ್ಯ ಇರುವ ಆಹಾರ ಸರಪಳಿಯಲ್ಲಿಯೂ ವೆತ್ಯಾಸವಾಗಿರುವುದು ಇಂಥ ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ವಿಶ್ಲೇಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News