ಚಿಕ್ಕಮಗಳೂರು: ಅಂತರ್ ಜಿಲ್ಲಾ ಬೈಕ್ ಕಳವು ಪ್ರಕರಣದ ಆರೋಪಿಯ ಬಂಧನ

Update: 2025-04-11 21:51 IST
ಚಿಕ್ಕಮಗಳೂರು: ಅಂತರ್ ಜಿಲ್ಲಾ ಬೈಕ್ ಕಳವು ಪ್ರಕರಣದ ಆರೋಪಿಯ ಬಂಧನ
  • whatsapp icon

ಚಿಕ್ಕಮಗಳೂರು: ಅಂತರ್ ಜಿಲ್ಲಾ ದ್ವಿಚಕ್ರ ವಾಹನ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸಿ 6.70 ಲಕ್ಷ ರೂ. ಮೌಲ್ಯದ 10 ಬೈಕ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪದೇ ಪದೇ ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳು ವರದಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್‍ಅಮಟೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್, ಉಪಪೊಲೀಸ್ ಮುಖ್ಯಾಧಿಕಾರಿ ಹಾಲಮೂರ್ತಿರಾವ್ ಮಾರ್ಗದರ್ಶನದಲ್ಲಿ ವೃತ್ತನಿರೀಕ್ಷಷಕ ಎಂ.ರಫಿಕ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ತನಿಖೆಯನ್ನು ಕೈಗೊಂಡು ತಂಡ ತಿಪಟೂರಿನ ಶಾರದ ನಗರದ ಗಂಗಾಧರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಿದಾಗ ಕಡೂರು ಪಟ್ಟಣ, ಅಜ್ಜಂಪುರ, ಹೊಸದುರ್ಗ, ಹಾಸನ, ಹೊಳಲ್ಕೆರೆ, ಚಿಕ್ಕಜಾಜೂರುನಲ್ಲಿ 10 ಬೈಕ್‍ಗಳನ್ನು ಕಳ್ಳ ತನ ಮಾಡಿರುವುದು ಬೆಳಕಿಗೆ ಬಂದಿದೆ.

ಕಳವು ಪ್ರಕರಣದಲ್ಲಿ ಆರೋಪಿಯಿಂದ 10 ಬೈಕ್‍ಗಳು ಕೃತ್ಯಕ್ಕೆ ಬಳಸಿದ ಒಂದು ಮೊಬೈಲ್ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖಾ ತಂಡದಲ್ಲಿ ಠಾಣಾಧಿಕಾರಿ ಸಿ.ಸಿ.ಪವನ್‍ಕುಮಾರ್, ಸಹಠಾಣಾಧಿಕಾರಿ ಧನಂಜಯ, ಲೀಲಾ ವತಿ, ವೇದಮೂರ್ತಿ ಸಿಬ್ಬಂದಿ ಮಧುಕುಮಾರ್, ಹರೀಶ, ಮಹಮ್ಮದ್ ರಿಯಾಝ್, ಧನಪಾಲನಾಯ್ಕ ಎ.ಓ.ಸ್ವಾಮಿ, ಜಿ.ಎಸ್. ಪರಮೇಶ್ವರನಾಯ್ಕ, ಜಿಲ್ಲಾ ಪೊಲೀಸ್ ಕಚೇರಿ ತಾಂತ್ರಿಕ ವಿಭಾಗದ ಅಬ್ದುಲ್‍ರಬ್ಬಾನಿ ಮತ್ತು ನಯಾಜ್ ಅಜುಂ ಕಾರ್ಯನಿರ್ವ ಹಿಸಿದ್ದರು.

ಬೈಕ್ ಕಳವು ಪ್ರಕರಣವನ್ನು ಪತ್ತೆಹಚ್ಚಿದ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವನ್ನು ಪೊಲೀಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಡಾ.ವಿಕ್ರಮ್ ಅಮಟೆ ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News