ಚಿಕ್ಕಮಗಳೂರು| ಆಟೊ - ಬಸ್ ಢಿಕ್ಕಿ: ಇಬ್ಬರು ಮೃತ್ಯು

Update: 2024-09-14 17:43 GMT

ಚಿಕ್ಕಮಗಳೂರು: ಖಾಸಗಿ ಸಾರಿಗೆ ಬಸ್ ಹಾಗೂ ಆಟೊ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೊ ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ ನಗರ ಸಮೀಪದ ನಲ್ಲೂರುಗೇಟ್ ಎಂಬಲ್ಲಿ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಮಲ್ಲೇದೇವರಹಳ್ಳಿ ಗ್ರಾಮದ ನಿವಾಸಿಗಳಾದ ಚಂದ್ರಶೇಖರ್(38), ರಾಘವೇಂದ್ರ (40) ಮೃತಪಟ್ಟವರು.

ಶುಕ್ರವಾರ ರಾತ್ರಿ ಮೂಡಿಗೆರೆಯಿಂದ ಚಿಕ್ಕಮಗಳೂರು ಮಾರ್ಗವಾಗಿ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸಾರಿಗೆ ಬಸ್ ನಗರ ಸಮೀಪದ ನಲ್ಲೂರು ಗೇಟ್ ಎಂಬಲ್ಲಿ ಬರುತ್ತಿದ್ದ ವೇಳೆ ನಲ್ಲೂರು ಗೇಟ್ ಕಡೆಯಿಂದ ಏಕಾಏಕಿ ಆಟೊ ಅಡ್ಡ ಬಂದಿದೆ ಎನ್ನಲಾಗಿದೆ. ಈ ವೇಳೆ ಸಾರಿಗೆ ಬಸ್ ಆಟೊಗೆ ಢಿಕ್ಕಿ ಹೊಡೆದ ಪರಿಣಾಮ ಆಟೊ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಚಾಲಕ ಹಾಗೂ ಹಿಂಬಂದಿಯಲ್ಲಿದ್ದ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News