ಚಿತ್ರದುರ್ಗ | ಇಸ್ರೋದಿಂದ ಸ್ವದೇಶಿ ಗಗನ ನೌಕೆ ‘ಪುಷ್ಪಕ್’ ಯಶಸ್ವಿ ಪ್ರಯೋಗ
ಚಿತ್ರದುರ್ಗ: ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ(ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ) ರವಿವಾರ ಮತ್ತೊಂದು ಸಾಧನೆಗೆ ಸಾಕ್ಷಿಯಾಯಿತು. ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಕುದಾಪುರ ಬಳಿ ಇರುವ ಡಿಆರ್‌ಡಿಒ ಆವರಣದಲ್ಲಿ 'ಮರು ಬಳಕೆ ಬಾಹ್ಯಾಕಾಶ ವಾಹನ’( ಆರ್ ಎಲ್ ವಿ)ದ ಲ್ಯಾಂಡಿಂಗ್ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತು.
ಎಸ್‌ಯುವಿ ಕಾರಿನಷ್ಟು ದೊಡ್ಡ ಗಾತ್ರದ ರೆಕ್ಕೆ ಇರುವ ರಾಕೆಟ್ ‘ಪುಷ್ಪಕ್ ಗಗನ ನೌಕೆ’, ಬೆಳಿಗ್ಗೆ 7 ಗಂಟೆಗೆ ಯಶಸ್ವಿಯಾಗಿ ಉಡಾವಣೆಗೊಂಡಿತು. ಮೂರನೇ ಮತ್ತು ಅಂತಿಮ ಬಾರಿಗೆ ಲ್ಯಾಂಡ್ ಆಗಬೇಕಿದ್ದ ಪ್ರಯೋಗದಲ್ಲಿ ಯಶಸ್ವಿಯಾಯಿತು.
ಪುಷ್ಪಕ್ ಗಗನ ನೌಕೆಯು ಮರು ಬಳಕೆ ಮಾಡಬಹುದಾದ ಬಾಹ್ಯಾಕಾಶ ವಾಹನವಾಗಿದೆ. ರಾಕೆಟ್ ರೀತಿ ಬಾಹ್ಯಾಕಾಶಕ್ಕೆ ಉಡಾವಣೆಗೊಳ್ಳುವ ಈ ವಾಹನ, ಮರಳಿ ಭೂಮಿಗೆ ಬಂದು ಲ್ಯಾಂಡ್ ಆಗುತ್ತದೆ. ಹಾಗಾಗಿ, ಈ ವಾಹನವನ್ನು ಸ್ವದೇಶಿ ಗಗನ ನೌಕೆ ಎಂದು ಹೇಳಲಾಗಿದೆ.
RLV-LEX3 images pic.twitter.com/PO0v0StC3A
— ISRO (@isro) June 23, 2024
RLV-LEX3 Video pic.twitter.com/MkYLP4asYY
— ISRO (@isro) June 23, 2024