ಚಿತ್ರದುರ್ಗ | ಎತ್ತಿನ ಗಾಡಿಗೆ ಟಿಪ್ಪರ್ ಢಿಕ್ಕಿ : ನಾಲ್ಕು ಎತ್ತುಗಳು, ಚಾಲಕ ಮೃತ್ಯು
Update: 2024-12-08 06:58 GMT
ಚಿತ್ರದುರ್ಗ ಡಿ.8.ಎತ್ತಿನ ಗಾಡಿಗೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ನಾಲ್ಕು ಎತ್ತುಗಳು ಮತ್ತು ಟಿಪ್ಪರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೊಳಕಾಲ್ಮೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೃೆರಾಪುರ ಗ್ರಾಮದ ಬಳಿ ನಡೆದಿದೆ.
ಮೃತ ಚಾಲಕನನ್ನು ಇಮ್ರಾನ್ ಎಂದು ಗುರುತಿಸಲಾಗಿದೆ. ಮರಳು ತುಂಬಿಕೊಂಡು ಬರಲು ತೆರಳುತ್ತಿದ್ದ ಟಿಪ್ಪರ್ ಲಾರಿಯು ಎತ್ತಿನಗಾಡಿ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.