ಚಿತ್ರದುರ್ಗ | ಟಿಟಿ ವಾಹನಕ್ಕೆ ಟಿಪ್ಪರ್ ಢಿಕ್ಕಿ; ಮೂವರು ಮೃತ್ಯು, ಆರು ಮಂದಿಗೆ ಗಾಯ
Update: 2025-03-29 13:20 IST
ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಹೆಗ್ಗೆರೆ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಟಿ ವಾಹನಕ್ಕೆ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮವಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿಗೆ ಗಾಯಗಳಾಗಿವೆ.
ಮೃತರನ್ನು ಕುಮಾರ ನಾಯ್ಕ್ (46) ಶಂಕರ್ ಬಾಯಿ (65) ಶ್ವೇತ ಎ.(38) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ತಮ್ಮ ಸ್ವಗ್ರಾಮ ತಳಕು ಜೆಮ್ಲಾ ನಾಯಕನಹಟ್ಟಿ ಗ್ರಾಮಕ್ಕೆ ಟಿಟಿ ವಾಹನದಲ್ಲಿ ಬರುತ್ತಿರುವಾಗ ಟಿಪ್ಪರ್ ಢಿಕ್ಕಿ ಹೊಡೆದಿದೆ.
ಗಾಯಳುಗಳಾದ ಲಕ್ಷ್ಮ ಬಾಯಿ,(75) ಪ್ರಶಾಂತ (38) ಶೈಲಜ (38) ಪುಷ್ಪವತಿ(19) ಟಿ.ಕೆ.ಪ್ರೀತಮ್ ಕುಮಾರ್ (16) ತಿಪ್ಪೇಸ್ವಾಮಿ(43) ಅವರಿಗೆ ಚಳಿಕೆರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.