ಚಿತ್ರದುರ್ಗ | ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ 2 ಲಾರಿಗಳು : ಮೂವರು ಮೃತ್ಯು

ಚಿತ್ರದುರ್ಗ : ಮೂರು ಲಾರಿಗಳ ನಡುವೆ ಭೀಕರ ಸರಣಿ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿತ್ರದುರ್ಗದ ಹೊರವಲಯದ ಸಿಬಾರ ಬಳಿ ಇಂದು(ಮಾ.5) ನಡೆದಿದೆ
ತಾಡಪತ್ರೆಯ ಶೇಖರ್(55), ತಮಿಳುನಾಡಿನ ಮುತ್ತನೂರು ಗ್ರಾಮದ ಪೆರಿಯಸ್ವಾಮಿ, ಉತ್ತರ ಪ್ರದೇಶದ ಅತ್ರೋಲಿ ಗ್ರಾಮದ ಮುಹಮ್ಮದ್ ಕೈಫ್ ಮೃತರು ಎಂದು ತಿಳಿದು ಬಂದಿದೆ. ಬಜರುದ್ದಿನ್ ಎಂಬವರು ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿತ್ರದುರ್ಗ ತಾಲೂಕಿನ ಸಿಬಾರ ಗ್ರಾಮದ ಹೆದ್ದಾರಿಯಲ್ಲಿ ಭತ್ತ ತುಂಬಿದ್ದ ಲಾರಿಯೊಂದು ಕೆಟ್ಟು ನಿಂತಿತ್ತು, ಈ ವೇಳೆ ಬಟ್ಟೆ ತುಂಬಿದ್ದ ಉತ್ತರ ಪ್ರದೇಶದ ಲಾರಿಯೊಂದು ಢಿಕ್ಕಿ ಹೊಡೆದಿದೆ. ಇದರ ಹಿಂದೆ ಬರುತ್ತಿದ್ದ ತಮಿಳುನಾಡು ಮೂಲದ ಕಲ್ಲಂಗಡಿ ತುಂಬಿದ್ದ ಲಾರಿಯೂ ಕೂಡ ಚಾಲಕನ ನಿಯಂತ್ರಣ ತಪ್ಪಿ ಬಟ್ಟೆ ತುಂಬಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ಮೂವರು ಮೃತಪಟ್ಟು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಚಿತ್ರದುರ್ಗ ಎಎಸ್ಪಿ ಕುಮಾರಸ್ವಾಮಿ, ಡಿವೈಎಸ್ಪಿ ದಿನಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.