ಮಹಾ ಕುಂಭಮೇಳದಲ್ಲಿ ಕಾಲ್ತುಳಿತ | ಕರ್ನಾಟಕದ ಮೂಲದ ನಾಗಸಾಧು ಮೃತ್ಯು
Update: 2025-01-31 21:47 IST

ಚಿತ್ರದುರ್ಗ : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳಿದ್ದ ನಗರದ ಬಂಜಾರ ಗುರುಪೀಠದ ನಾಗಸಾಧು ನಾಗನಾಥ್ ಮಹರಾಜ್ (48) ಅವರು ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ತಾಲ್ಲೂಕಿನ ಸಿಬಾರದಲ್ಲಿರುವ ಬಂಜಾರ ಗುರುಪೀಠದಲ್ಲಿ ನಾಗನಾಥ್ ಮಹರಾಜ್ 7 ವರ್ಷಗಳಿಂದ ವಾಸಿಸುತ್ತಿದ್ದರು. 15 ದಿನಗಳ ಹಿಂದಷ್ಟೇ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಪ್ರಯಾಗ್‌ರಾಜ್‌ಗೆ ತೆರಳಿದ್ದರು ಎನ್ನಲಾಗಿದೆ.
ಮಹಾ ಕುಂಭಮೇಳ ಸಂಭವಿಸಿದ ಕಾಲ್ತುಳಿತದಲ್ಲಿ ಈಗಾಗಲೇ ರಾಜ್ಯದ ನಾಲ್ವರು ಮೃತಪಟ್ಟಿದ್ದು, ಇದೀಗ ಮೃತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.