ದ್ವೇಷ ಭಾಷಣ ಆರೋಪ: ಉಪನ್ಯಾಸಕ ಡಾ.ಅರುಣ್ ಉಳ್ಳಾಲ್‌ ವಿರುದ್ಧ ಪ್ರಕರಣ ದಾಖಲು

Update: 2024-10-05 17:02 GMT

ಡಾ.ಅರುಣ್ ಉಳ್ಳಾಲ್‌

ಮಂಗಳೂರು: ಧರ್ಮಗಳ ಮಧ್ಯೆ ದ್ವೇಷಕಾರುವ ಭಾಷಣ ಮಾಡಿದ ಆರೋಪ ಎದುರಿಸುತ್ತಿರುವ ಉಪನ್ಯಾಸಕ ಡಾ. ಅರುಣ್ ಉಳ್ಳಾಲ್ ವಿರುದ್ಧ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಈತ ಧರ್ಮಗಳ ‌ಮಧ್ಯೆ ವಿಷ ಬೀಜ ಬಿತ್ತುವಂತಹ ಭಾಷಣ ಮಾಡಿದ್ದಾನೆ ಎಂಬ ಆರೋಪ ಈತನ ಮೇಲೆ ಕೇಳಿ ಬಂದಿತ್ತು. ಅಲ್ಲದೆ ಈತನ ಭಾಷಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಪೊಲೀಸ್ ಇಲಾಖೆಯು ಕಾನೂನು ಕ್ರಮಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿ ಬಂದಿತ್ತು. ಈ ಬಗ್ಗೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆಯು ಪ್ರಕರಣ ದಾಖಲಿಸಿಕೊಂಡಿದೆ.

"ಜನಾಂಗೀಯ ದ್ವೇಷ ಮತ್ತು ಧಾರ್ಮಿಕ ತಾರತಮ್ಯ ಹಾಗೂ ಹಿಂಸೆಗೆ ಪ್ರಚೋದನೆ ನೀಡುವ ಭಾಷಣಗೈದ ಡಾ. ಅರುಣ್ ಉಳ್ಳಾಲ್ ವಿರುದ್ಧ ಮಂಗಳೂರು ಪೊಲೀಸ್ ಇಲಾಖೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವುದು ಸ್ವಾಗತಾರ್ಹ. ಆದರೆ, ಪ್ರಕರಣ ಐಟಿ ಸೆಕ್ಷನ್‌ನಡಿ ಸೆನ್ ಠಾಣೆಯಲ್ಲಿ ದಾಖಲಿಸಿದ್ದು ಸರಿಯಲ್ಲ. ಘಟನೆ ನಡೆದದ್ದು ಸಾಮಾಜಿಕ ಜಾಲತಾಣದಲ್ಲಿ ಅಲ್ಲ, ಉಳ್ಳಾಲ ಠಾಣಾ ವ್ಯಾಪ್ತಿಯ ಕಿನ್ಯಾ ಗ್ರಾಮದ ಕೇಶವ ಶಿಶು ಮಂದಿರದಲ್ಲಿ. ಅದರ ಆಡಳಿತ ಸಮಿತಿ ಆಯೋಜಿಸಿದ ಕಾರ್ಯಕ್ರಮದ ವೇದಿಕೆಯಲ್ಲಿ ಘಟನೆ ನಡೆದ ಕಾರಣ ಪೊಲೀಸರು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕಿತ್ತು. ಕಾರ್ಯಕ್ರಮದ ಆಯೋಜಕರು ಇಂತಹ ಭಾಷಣಕ್ಕೆ ಅರುಣ್ ಉಳ್ಳಾಲರಿಗೆ ವೇದಿಕೆಯಲ್ಲಿದ್ದು, ಪ್ರೇರಣೆ ಒದಗಿಸಿದ ಕಲ್ಲಡ್ಕ ಪ್ರಭಾಕರ ಭಟ್ ಮುಂತಾದವರನ್ನು ಆರೋಪಿಯಾಗಿಸಿ ಪ್ರಕರಣ ದಾಖಲಿಸಬೇಕಿತ್ತು. ಅದರ ಬದಲಿಗೆ ಐಟಿ ಸೆಕ್ಷನ್‌ನಡಿ ಪ್ರಕರಣ ದಾಖಲಿಸಿರುವುದರಿಂದ ಪ್ರಕರಣ ದುರ್ಬಲಗೊಳ್ಳುವ, ಆರೋಪಿ ಬಚಾವಾಗುವ ಸಾಧ್ಯತೆಗಳಿವೆ. ಮಂಗಳೂರು ಪೊಲೀಸ್ ಕಮಿಷನರ್ ಈ ಬಗ್ಗೆ ಗಮನ ಹರಿಸಿ, ಜನಾಂಗ ದ್ವೇಷದ ಮಾತುಗಾರರು ತಪ್ಪಿಸಿಕೊಳ್ಳದಂತೆ ಎಫ್‌ಐಆರ್ ಬಲಗೊಳಿಸಲು ಕ್ರಮ ಕೈಗೊಳ್ಳಬೇಕು.

-ಮುನೀರ್ ಕಾಟಿಪಳ್ಳ, ಸಾಮಾಜಿಕ ಹೋರಾಟಗಾರರು

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News