ಟೀಂ ಬಿ-ಹ್ಯೂಮನ್ ಸಂಸ್ಥೆಯಿಂದ ವೆನ್ಲಾಕ್‌ನಲ್ಲಿ ರೋಗಿಗಳಿಗೆ ಹಣ್ಣು ಹಂಪಲು, ದಿನಬಳಕೆ ವಸ್ತುಗಳ ವಿತರಣೆ

Update: 2024-11-07 15:19 GMT

ಮಂಗಳೂರು: ಟೀಂ ಬಿ-ಹ್ಯೂಮನ್ ಸಂಸ್ಥೆಯ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವೆನ್ಲಾಕ್ ಆಸ್ಪತ್ರೆಯ ಡಯಾಲಿಸಿಸ್ ರೋಗಿಗಳ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಮಧ್ಯಾಹ್ನದ ಊಟ, ಬ್ಲಾಂಕೆಟ್, ಟಾವೆಲ್ಸ್ ಮತ್ತು ಮಕ್ಕಳಿಗೆ ಆಟಿಕೆ, ಹಣ್ಣು ಹಂಪಲು, ಬಿಸ್ಕೆಟ್, ಚಾಕಲೇಟ್, ಪ್ಯಾಂಪರ್ಸ್, ಪಾದರಕ್ಷೆ ಮತ್ತಿತರ ವಸ್ತುಗಳನ್ನು ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ವೆನ್ಲಾಕ್ ಆಸ್ಪತ್ರೆಯ ಡಿಎಂಒ ಡಾ.ಶಿವ ಪ್ರಕಾಶ್ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಟೀಂ ಬಿ-ಹ್ಯೂಮನ್ ಸಂಸ್ಥೆಯ ಉದ್ದೇಶವು ಜನಸಾಮಾನ್ಯರ ಆರೋಗ್ಯ ಮತ್ತು ಅವರು ಬಳಲುತ್ತಿರುವ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ ಹಾಗೂ ವೆನ್ಲಾಕ್ ಆಸ್ಪತ್ರೆ ಸುಸಜ್ಜಿತವಾದ ಡಯಾಲಿಸ್ ಸೆಂಟರ್ ಹೊಂದಿದ್ದು ಮತ್ತು ಮಕ್ಕಳ ವಾರ್ಡಿನಲ್ಲಿ ಎಲ್ಲಾ ತರದ ಚಿಕಿತ್ಸೆ ಇದ್ದು ವಿಶೇಷ ವೈದ್ಯಕೀಯ ಸೇವೆಗಳೊಂದಿಗೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುವ ಬಡ ಸಮುದಾಯಗಳಿಗೆ ಉಚಿತ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.

ಟೀಂ ಬಿ-ಹ್ಯೂಮನ್ ಸಂಸ್ಥೆಯ ಟ್ರಸ್ಟಿ ಶರೀಫ್ ವೈಟ್ ಸ್ಟೋನ್ ಸ್ವಾಗತಿಸಿ, ತಮ್ಮ ಸಂಸ್ಥೆಯು ಸುಮಾರು ಎರಡು ವರ್ಷ ದಿಂದ ಯೆನೆಪೊಯ ಹಾಗೂ ಕಣಚೂರು ಆಸ್ಪತ್ರೆಯಲ್ಲಿ ಹಲವು ರೋಗಿಗಳಿಗೆ ಉಚಿತ ಡಯಾಲಿಸಿಸ್ ಚಿಕಿತ್ಸೆಯನ್ನು ಕೊಡಿಸಿದೆ ಎಂದರು.

ಟೀಂ ಬಿ-ಹ್ಯೂಮನ್ ಸಂಸ್ಥೆಯ ಸಂಸ್ಥಾಪಕ ಆಸಿಫ್ ಡೀಲ್ಸ್ ಮಾತನಾಡಿ, ಸಂಸ್ಥೆಯ ಉದ್ದೇಶವು ಜಾತಿ, ಮತ, ಧರ್ಮ ಎಂಬ ವ್ಯತ್ಯಾಸವಿಲ್ಲದೆ ಬಡವರಿಗೆ ಹಾಗೂ ಕಷ್ಟದಲ್ಲಿ ಇರುವವರಿಗೆ ಸಹಾಯ ನೀಡುವುದಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯು ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದರು.

ಸಭೆಯಲ್ಲಿ ವೆನ್ಲಾಕ್ ಆಸ್ಪತ್ರೆಯ ಆರ್‌ಎಂಒ ಡಾ. ಸುಧಾಕರ್.ಟಿ, ತಜ್ಞ ವೈದ್ಯರುಗಳಾದ ಡಾ. ಸದಾನಂದ ಪೂಜಾರಿ, ಡಾ.ಅಬ್ದುಲ್ ಬಾಸಿತ್ , ನರ್ಸಿಂಗ್ ಇನ್‌ಚಾರ್ಜ್ ಸುಮಂಗಲ, ಕಚೇರಿ ಅಧೀಕ್ಷಕ ತಿಲಕ ಯು, ಎಸ್‌ಡಿಒ ಅವಿಲ್ ಕ್ಲಾರೆನ್ಸ್ ರಾಜ್ , ಅಬ್ದುಲ್ ಸಲೀಂ ಮತ್ತು ಅರೋಗ್ಯ ಸಮಿತಿ ಸದಸ್ಯ ಶಶಿಧರ್.ಕೆ ಬಜಾಲ್, ಎಆರ್‌ಎಸ್ ಸದಸ್ಯ ಪ್ರಭಾಕರ್ ಅಮೀನ್ ಹಾಗೂ ಟೀಂ ಬಿ-ಹ್ಯೂಮನ್ ಸದಸ್ಯರಾದ ಇಮ್ತಿಯಾಝ್ ಝೆಡ್‌ಎಂ , ಅಬ್ಬಾಸ್ ಉಚ್ಚಿಲ್, ಇಮ್ರಾನ್ ಹಸನ್, ನಝೀರ್ ಉಳ್ಳಾಲ, ಇಕ್ಬಾಲ್ ಬಂಟ್ವಾಳ, ಅಹ್ನಾಫ್ ಡೀಲ್ಸ್‌, ಬಶೀರ್, ಅಝೀಝ್, ಫೈಝ್, ಶಿಹಾಬ್, ಟೀಂ‌ ಬಿ-ಹ್ಯೂಮನ್ ಆರೋಗ್ಯ ಉಸ್ತುವಾರಿ ಹನೀಫ್ ತೊಡಾರ್ ಉಪಸ್ಥಿತರಿದ್ದರು.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News