ಸೋಮೇಶ್ವರ| ಪೈಪ್‌ಲೈನ್ ಕಾಮಗಾರಿ: ಪರ್ಯಾಯ ರಸ್ತೆ ಬಳಕೆಗೆ ಸೂಚನೆ

Update: 2024-11-07 15:05 GMT

ಸಾಂದರ್ಭಿಕ ಚಿತ್ರ

ಉಳ್ಳಾಲ : ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕುಂಪಲ ಬೈಪಾಸ್ ಮುಖ್ಯ ರಸ್ತೆಯಿಂದ ಬಾಲಕೃಷ್ಣ ಮಂದಿರದವರೆಗಿನ ಮುಖ್ಯರಸ್ತೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪೈಪ್‌ಲೈನ್ ಕಾಮಗಾರಿಯು ಪ್ರಗತಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಈ ರಸ್ತೆಯನ್ನು ನ.7 ರಿಂದ ನ.10ರವರೆಗೆ ಸಂಪೂರ್ಣ ಬಂದ್ ಮಾಡಲಾಗುವುದು.

ಪರ್ಯಾಯ ಮಾರ್ಗವಾಗಿ ದೇರಳಕಟ್ಟೆ, ಯೆನಪೋಯ, ಕೊಲ್ಯ ಶಾರದೋತ್ಸವ ಸಮಿತಿ ಪಕ್ಕದ ರಸ್ತೆ, ಕೊಲ್ಯ ಕನೀರ್‌ ತೋಟ ರಸ್ತೆಯನ್ನು ಉಪಯೋಗಿಸಬೇಕು ಎಂದು ಸೋಮೇಶ್ವರ ಪುರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News