ಮಂಗಳೂರು| ಲಾಟರಿ, ಬೆಟ್ಟಿಂಗ್, ಮಟ್ಕಾ ವಿರುದ್ಧ ಕಾರ್ಯಾಚರಣೆಗೆ ಎಡಿಸಿ ಸೂಚನೆ

Update: 2024-11-07 14:52 GMT

ಮಂಗಳೂರು: ಲಾಟರಿ, ಬೆಟ್ಟಿಂಗ್, ಮಟ್ಕಾ ಮುಂತಾದಅನಧಿದಿಕೃತ ಚಟುವಟಿಕೆಗಳನ್ನು ತಡೆಗಟ್ಟಲು ರಚಿಸಲಾಗಿರುವ ಫ್ಲೈಯಿಂಗ್ ಸ್ಕ್ಯಾಡ್ ತಂಡವುನಿರಂತರವಾಗಿ ಕಾರ್ಯಾಚರಣೆ ನಡೆಸಿ ಅಕ್ರಮ ತಡೆಗಟ್ಟಲು ಅಪರ ಜಿಲ್ಲಾಧಿಕಾರಿ ಡಾ. ಜಿ ಸಂತೋಷ್ ಕುಮಾರ್‌ಸೂಚಿಸಿದ್ದಾರೆ.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಲಾಟರಿ ಹಾವಳಿಯನ್ನು ನಿಯಂತ್ರಣ ಸಂಬಂಧ ಫ್ಲೈಯಿಂಗ್ ಸ್ಕ್ವಾಡ್ ತ್ರೈಮಾಸಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ತಪಾಸಣಾ ತಂಡಗಳು ಮುತುವರ್ಜಿಯಿಂದ ಕೆಲಸ ಮಾಡಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಫ್ಲೈಯಿಂಗ್ ಸ್ಕ್ಯಾಡ್ ಸಭೆ ನಡೆಯಬೇಕು. ಇಲ್ಲಿಯವರೆಗೂ ನಡೆದ ಪ್ರಕರಣಗಳ ಬಗ್ಗೆ ಜರುಗಿಸಿದ ಕ್ರಮದ ಬಗ್ಗೆ ಮಾಹಿತಿಯನ್ನು ಒದಗಿಸಬೇಕು ಎಂದು ಅವರು ಹೇಳಿದರು.

ಆನ್‌ಲೈನ್ ಆ್ಯಪ್‌ಗಳನ್ನು ನಂಬಿ ಸಾರ್ವಜನಿಕರು ಹಣವನ್ನು ಹೂಡಿಕೆ ಮಾಡಿ ವಂಚನೆಗೆ ಒಳಗಾಗುವ ಪ್ರಕರಣಗಳು ಅತಿಯಾಗಿ ನಡೆಯುತ್ತಿದ್ದು, ಇಂತಹ ವಂಚನೆಗಳಿಗೆ ಸಾರ್ವಕನಿಕರು ಬಲಿಪಶುಗಳಾಗಬಾರದು. ಸೈಬರ್ ವಂಚನೆ ಅಥವಾ ಇನ್ನು ಅನಧಿಕೃತ ಪ್ರಕರಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಯಾವುದೇ ಹಿಂಜರಿಕೆ ಇಲ್ಲದೆ ಹತ್ತಿರದ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಹಣದ ಆಮಿಷಕ್ಕಾಗಿ ಆನ್‌ಲೈನ್ ಮೂಲಕ ತಮ್ಮ ಹಣವನ್ನು ಹೂಡಿಕೆ ಮಾಡಿ ವಂಚನೆಗೊಳಗಾಗುವ ಪ್ರಕರಣಗಳು ಹೆಚ್ಚುತ್ತಿದೆ. ಸಾರ್ವಜನಿಕರು ಯಾವುದೇ ನಕಲಿ ಜಾಲತಾಣಗಳನ್ನು ನಂಬಿ ಹಣ ವನ್ನು ಹೂಡಿಕೆ ಮಾಡಬಾರದು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹಣವನ್ನು ಹೂಡಿಕೆ ಮಾಡುವಂತೆ ಜಾಗೃತಿ ಮೂಡಿಸಲು ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.

ಆನ್‌ಲೈನ್ ವಂಚನೆ ಪ್ರಕರಣಗಳು ಕಂಡು ಬಂದಲ್ಲಿ ಪೊಲೀಸ್‌ಇಲಾಖೆಯು ಶೀಘ್ರವಾಗಿ ಕ್ರಮಜರುಗಿಸಬೇಕು ಎಂದರು.

ಕರ್ನಾಟಕ ಸರಕಾರವು ಈಗಾಗಲೇ ಲಾಟರಿಗಳನ್ನು ರಾಜ್ಯದಲ್ಲಿ ನಿಷೇಧಿಸಿದ್ದರೂ ಕೂಡ ಜಿಲ್ಲೆಯ ಕೇರಳ ಗಡಿ ಭಾಗಗಳಲ್ಲಿ ಲಾಟರಿ ಹಾವಳಿಗಳು ಹೆಚ್ಚುತ್ತಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಲಾಟರಿ ಹಾವಳಿ ನಡೆಯು ಇರುವ ಪ್ರದೇಶಗಳಿಗೆ ನಿರಂತರ ಭೇಟಿ ಪರಿಶೀಲನೆ ನಡೆಸಿ ಲಾಟರಿ ದಂಧೆ ನಡೆಸುತ್ತಿರುವವರ ವಿರುದ್ಧ ಕ್ರಮಜರುಗಿಸುವಂತೆ ಅವರು ತಿಳಿಸಿದರು.

ಸಭೆಯಲ್ಲಿ ಎಸಿಪಿ ಮನೋಜ್‌ಕುಮಾರ್ ನಾಯ್ಕ್, ಡಿವೈಎಸ್‌ಪಿ ಮಂಜುನಾಥ ಆರ್ ಜಿ, ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ( ಪಶ್ಚಿಮ ವಲಯ) ಡಿ.ರಂಗರಾಜು, ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಸಹಾಯಕ ನಿರ್ದೇಶಕ ಎಂ.ಪಿ ಪ್ರಸನ್ನ, ಪಿಂಚಣಿ , ಸಣ್ಣ ಉಳಿತಾಯ ಅಭಿವೃದ್ಧಿ ಅಧಿಕಾರಿ ಆನಂದ್ ಎಂ.ಪಿ, ಪ್ರಥಮದರ್ಜೆ ಸಹಾಯಕಿ ಅನಿತಾ ಲಕ್ಷ್ಮೀ ಎಂ.ಎಚ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News