ಅ.2ರಂದು ಇಲಲ್ ಹಬೀಬ್ ಮೀಲಾದ್ ರ್‍ಯಾಲಿ: ಸ್ವಾಗತ ಸಮಿತಿ ರಚನೆ

Update: 2023-09-15 05:46 GMT

 ಮಂಗಳೂರು, ಸೆ.15: ಕರ್ನಾಟಕ ಮುಸ್ಲಿಂ ಜಮಾಅತ್, ಎಸ್.ವೈ.ಎಸ್, ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ಸಮಿತಿಯ ಅಧೀನದಲ್ಲಿ ಅಕ್ಟೋಬರ್ 2ರಂದು ಅಪರಾಹ್ನ 2ಕ್ಕೆ ಮಂಗಳೂರಿನಲ್ಲಿ ಇಲಲ್ ಹಬೀಬ್ ಮೀಲಾದ್ ರ್‍ಯಾಲಿ ಹಾಗೂ ಪ್ರವಾದಿ ಸಂದೇಶ ಭಾಷಣ ಕಾರ್ಯಕ್ರಮ ಹಮ್ಮಿಕೊಳ್ಳಲು ಜಂಇಯ್ಯತುಲ್ ಉಲಮಾ ಕಚೇರಿಯಲ್ಲಿ ನಡೆದ ಸುನ್ನೀ ಸಂಘಟನೆಗಳ ಜಂಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಎಸ್ಸೆಸ್ಸೆಫ್ ಜಿಲ್ಲಾ ಅಧ್ಯಕ್ಷ ಮನ್ಸೂರ್ ಹಿಮಮಿ ಮೊಂಟೆಪದವು ಸಭೆಯನ್ನು ಉದ್ಘಾಟಿಸಿದರು. ಎಸ್ ವೈ ಎಸ್ ಜಿಲ್ಲಾ ಉಪಾಧ್ಯಕ್ಷ ಬಶೀರ್ ಮದನಿ ಅಲ್ ಕಾಮಿಲ್ ಅಧ್ಯಕ್ಷತೆ ವಹಿಸಿದ್ದರು.

ಎಸ್.ವೈ.ಎಸ್. ಜಿಲ್ಲಾ ಪ್ರ.ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪ್ರಿಂಟೆಕ್, ಮುಸ್ಲಿಂ ಜಮಾಅತಿನ ಅಶ್ರಫ್ ಕಿನಾರ, ಖಲೀಲ್ ಮಾಲಿಕಿ ಬೋಳಂತೂರು, ಎಸ್ಸೆಸ್ಸೆಫ್ ಜಿಲ್ಲಾ ಪ್ರ.ಕಾರ್ಯದರ್ಶಿ ಸುಹೈಲ್ ಫರಂಗಿಪೇಟೆ, ಮಹಬೂಬ್ ಸಖಾಫಿ ಕಿನ್ಯ ಮುಂತಾದವರು ಮಾತನಾಡಿದರು.

ಎಸ್ಸೆಸ್ಸೆಫ್ ಜಿಲ್ಲಾ ಕೋಶಾಧಿಕಾರಿ ಇರ್ಶಾದ್ ಗೂಡಿನಬಳಿ ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ಮೀಲಾದ್ ರ್‍ಯಾಲಿ ನಿರ್ವಹಣೆಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಹಾಫಿಳ್ ಯಾಕೂಬ್ ಸಅದಿ ನಾವೂರು, ಜನರಲ್ ಕನ್ವೀನರ್ ಆಗಿ ಅಶ್ರಫ್ ಕಿನಾರ ಮಂಗಳೂರು, ಕೋಶಾಧಿಕಾರಿಯಾಗಿ ಅಜ್ಮಲ್ ಕಾವೂರು, ಮೀಡಿಯಾ ಕನ್ವೀನರ್ ಆಗಿ ಶಾಕಿರ್ ಎಂಎಸ್ಸಿ ಬಜ್ಪೆ ಹಾಗೂ ಸಮಿತಿ ಸದಸ್ಯರನ್ನಾಗಿ ಮುಸ್ಲಿಂ ಜಮಾಅತ್ ಜಿಲ್ಲಾ ಅಧ್ಯಕ್ಷ ಬಿ.ಎಂ.ಮುಮ್ತಾಝ್ ಅಲಿ, ಪ್ರಧಾನ ಕಾರ್ಯದರ್ಶಿ ರಹೀಂ ಸಅದಿ ಕತರ್, ಎಸ್.ವೈ.ಎಸ್. ಜಿಲ್ಲಾ ಅಧ್ಯಕ್ಷ ವಿ.ಯು.ಇಸಾಕ್ ಝುಹ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೃಷ್ಣಾಪುರ ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಮನ್ಸೂರ್ ಹಿಮಮಿ ಮೊಂಟೆಪದವು, ಪ್ರಧಾನ ಕಾರ್ಯದರ್ಶಿ ಸುಹೈಲ್ ಫರಂಗಿಪೇಟೆ, ಹಾಗೂ ಬಶೀರ್ ಹಾಜಿ ಮಿತ್ತಬೈಲು, ಬಿ.ಎ.ಅಬ್ದುಲ್ ಸಲೀಂ ಹಾಜಿ ಅಡ್ಯಾರ್ ಪದವು ಫಾರೂಕ್ ತಲಪಾಡಿ, ಬಶೀರ್ ಸಾಜಿಗಾರ್ ಮುಡಿಪು, ಬದ್ರುದ್ದೀನ್ ಅಝ್ಹರಿ ಬಡಕಬೈಲು, ಇಸ್ಮಾಯೀಲ್ ಮಾಸ್ಟರ್ ಮರಿಕ್ಕಳ, ಅಬ್ದುಲ್ ಜಬ್ಬಾರ್ ಕಣ್ಣೂರು, ಹಸನ್ ಪಾಂಡೇಶ್ವರ, ಇರ್ಶಾದ್ ಹಾಜಿ ಗೂಡಿನಬಳಿ, ನೌಸೀಫ್ ಪಂಜಿಮೊಗರು, ರವೂಫ್ ಹಿಮಮಿಯವರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News