ಮಂಗಳೂರು: ಅತ್ಯಾಧುನಿಕ ವೈದ್ಯಕೀಯ ಉಪಕರಣಗಳ ಟೆಸ್ಟಿಂಗ್‌ ಲ್ಯಾಬ್‌ ಆರಂಭಿಸಿದ ಇಂಪೆಲ್ಸಿಸ್‌

Update: 2023-12-18 10:57 GMT

ಮಂಗಳೂರು: ಖ್ಯಾತ ತಂತ್ರಜ್ಞಾನ ಕಂಪೆನಿ ಇಂಪೆಲ್ಸಿಸ್ತನ್ನ ಅತ್ಯಾಧುನಿನ ವೈದ್ಯಕೀಯ ಉಪಕರಣ ಟೆಸ್ಟಿಂಗ್ಲ್ಯಾಬ್ಅನ್ನು ನಗರದಲ್ಲಿ ಆರಂಭಿಸಿದೆ. ಲಾಯೆರ್ಡಲ್, ಬೆಂಗಳೂರು ಎಲ್ಎಲ್ಪಿ ಇದರ ಆಡಳಿತ ನಿರ್ದೇಶಕ ಶ್ಯಾಮ್ಶೆಟ್ಟಿ ಲ್ಯಾಬ್ಅನ್ನು ಉದ್ಘಾಟಿಸಿದರು.

ಇಂಪೆಲ್ಸಿಸ್ಸಂಸ್ಥೆಯು ಆರೋಗ್ಯಸೇವಾ ಕ್ಷೇತ್ರದ ಟೆಸ್ಟಿಂಗ್ಸೌಲಭ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಅವರು ಶ್ಲಾಘಿಸಿದರಲ್ಲದೆ ನಗರದಲ್ಲಿ ಆರಂಭಗೊಂಡ ಸಂಸ್ಥೆಯು ನಗರ ಹಾಗೂ ಸುತ್ತಮುತ್ತಲಿನ ಅರ್ಹ ಯುವಜನತೆಗೆ ಉದ್ಯೋಗಾವಕಾಶಗಳನ್ನೂ ಒದಗಿಸಬಲ್ಲುದು ಎಂದು ಹೇಳಿದರು.

ಇಂಪೆಲ್ಸಿಸ್ಸಂಸ್ಥೆಯ ಜಾಗತಿಕ ಮುಖ್ಯಸ್ಥ ಮತ್ತು ನಿರ್ದೇಶಕರಾದ ವಿನ್ಸೆಂಟ್ಎಮರಾಲ್ಡ್ಮಾತನಾಡಿ, ಆರೋಗ್ಯಸೇವೆ ಕ್ಷೇತ್ರದಲ್ಲಿ ಪರಿವರ್ತನೆಗೆ ಇನ್ನಷ್ಟು ವೇಗ ನೀಡುವುದು ತಮ್ಮ ಸಂಸ್ಥೆಯ ಉದ್ದೇಶವೆಂದು ಹೇಳಿದರು. ರೋಗಿಗಳಿಗೆ ಸುರಕ್ಷಿತ ಆರೈಕೆ ಒದಗಿಸಲು ಆಸ್ಪತ್ರೆಗಳಿಗೆ ಬೆಂಬಲ ನೀಡುವದರ ಜೊತೆಗೆ ವೈದ್ಯಕೀಯ ಉಪಕರಣಗಳ ಒಇಎಂಗಳಗಿಎ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಣಾಮಕಾರಿಯಾಗಿ ಪರಿಚಯಿಸಲು ಸಹಾಯಕವಾಗಲು ತಮ್ಮ ಸಂಸ್ಥೆ ಕಾರ್ಯಿರ್ವಹಿಸುತ್ತದೆ ಎಂದು ಅವರು ಹೇಳಿದರು.

ತಮ್ಮ ಸಂಸ್ಥೆಯು ಆರೋಗ್ಯಸೇವಾ ಸೌಕರ್ಯಗಳನ್ನು ಅತ್ಯಾಧುನಿಕ ತಂತ್ರಜ್ಞಾನಗಳ ಮತ್ತು ಆವಿಷ್ಕಾರಿ ಪರಿಹಾರಗಳನ್ನು ಬಳಸಿ ಇನ್ನಷ್ಟು ಉನ್ನತೀಕರಿಸುವ ಉದ್ದೇಶವನ್ನು ಹೊಂದಿದೆ ಎಂದು ವಿನ್ಸೆಂಟ್ಹೇಳಿದ್ದಾರೆ.

 

 

 

 

 

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News