ಮಂಗಳೂರು: ‘ದಿ ಓಶಿಯನ್ ಪರ್ಲ್’ನಲ್ಲಿ ‘ಮೆಡಿಟರ್ರೇನಿಯನ್ ಫುಡ್ ಫೆಸ್ಟಿವಲ್’
ಮಂಗಳೂರು, ಜು.28: ನಗರದ ನವಭಾರತ್ ಸರ್ಕಲ್ ಬಳಿಯಿರುವ ‘ದಿ ಓಶಿಯನ್ ಪರ್ಲ್’ನಲ್ಲಿ ‘ಮೆಡಿಟರ್ರೇನಿಯನ್’ ಫುಡ್ ಫೆಸ್ಟಿವಲ್’ ಜು.24ರಿಂದ ಆರಂಭಗೊಂಡಿದ್ದು, ಆಗಸ್ಟ್ 6ರವರೆಗೆ ಇರಲಿದೆ.
ಯುರೋಪ್ ಖಂಡದ ‘ಮೆಡಿಟರೇನಿಯನ್ ಸಮುದ್ರ ತೀರದ ಒಂಭತ್ತು ವಿವಿಧ ರಾಷ್ಟ್ರ’ಗಳ ನಾನಾ ಬಗೆಯ ಸ್ವಾದಿಷ್ಟಕರ ಆಹಾರವನ್ನು ಕುಟುಂಬ ಸಮೇತವಾಗಿ ಸವಿಯಲು ‘ದಿ ಓಶಿಯನ್ ಪರ್ಲ್’ ಅವಕಾಶ ಕಲ್ಪಿಸಿದೆ. ಅಲ್ಲದೆ ಪಾರ್ಸೆಲ್ ವ್ಯವಸ್ಥೆಯೂ ಇದೆ. ಪ್ರತೀ ದಿನ ಮಧ್ಯಾಹ್ನ 12ರಿಂದ ಅಪರಾಹ್ನ 3 ಮತ್ತು ರಾತ್ರಿ 7ರಿಂದ 11ರವರೆಗೆ ಈ ರಾಷ್ಟ್ರಗಳ ಬಿರಿಯಾನಿ, ಕಬಾಬ್, ಸೂಪ್, ಸಮೂಸ, ಬ್ರೆಡ್ ಇತ್ಯಾದಿಗಳ ರುಚಿಯನ್ನು ಸವಿಯಬಹುದು ಎಂದು ಪ್ರಕಟನೆ ತಿಳಿಸಿದೆ.
ಸ್ಪೇನ್, ಇಟಲಿ, ಗ್ರೀಸ್, ಅಲ್ಜೀರಿಯಾ, ಲಿಬಿಯಾ, ಮೊರಕ್ಕೊ, ಟರ್ಕಿ ದೇಶಗಳ ಚಿಕನ್, ಮಟನ್ ಬಿರಿಯಾನಿ, ಖಾದ್ಯ ಪದಾರ್ಥಗಳು, ಸಮೂಸ, ಬ್ರೆಡ್ ಹೀಗೆ ಒಟ್ಟು 41 ಬಗೆಯ ಆಹಾರ-ತಿಂಡಿ-ತಿನಿಸುಗಳು ಈ ಫುಡ್ ಫೆಸ್ಟಿವಲ್‌ನಲ್ಲಿ ಲಭ್ಯವಿವೆ.
ಈ ಫೆಸ್ಟಿವಲ್‌ಗೆಂದೇ ಮೂಲತಃ ತಮಿಳುನಾಡಿನ ಸದ್ಯ ಆಸ್ಟೇಲಿಯಾದಲ್ಲಿರುವ ಶೆಫ್ ‘ರಾಹುಲ್’ರನ್ನು ಕರೆಸಿಕೊಳ್ಳಲಾಗಿದೆ. ಅವರ ನೇತೃತ್ವದಲ್ಲಿ ಇತರ ಶೆಫ್‌ಗಳು ಶುಚಿ-ರುಚಿಕರವಾದ ಆಹಾರಗಳ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ‘ದಿ ಓಶಿಯನ್ ಪರ್ಲ್’ ಪ್ರಕಟನೆಯಲ್ಲಿ ತಿಳಿಸಿದೆ.
*ಗ್ರಿಲ್ ಮಾಡಲಾದ ಚಿಕನ್‌ನ ಶಿಶ್ ತವೂಕ್, ಗಾರ್ಲಿಕ್ ಹಾರಿಸ್ಸಾ ಚಿಕನ್, ವೆಜ್ ಸೋವುಲಾಕಿ, ಚಿಕನ್ ಮಂದಿ (ಅಲ್ ಫಹಾಮ್ ಗ್ರಿಲ್ಡ್), ಮಸಾಲೆ ಮಿಶ್ರಿತ ಇಟೆಲಿಯ ಪಾಸ್ಟಸ್ ಮತ್ತು ಸೌಸ್, ಲಹಮ್ ರಿಝ್ ಪಿಲಾಫ್, ಜೆಮಿಸ್ಟಾ, ಫಿಶ್ ಮಂದಿ/ಕಬ್ಸಗಳು ಲಭ್ಯ ಇವೆ.
*ಈ ಫೆಸ್ಟಿವಲ್‌ನಲ್ಲಿ ವಿಶೇಷ ರುಚಿಯ ಪಿಟಾ ಬ್ರೆಡ್, ಪಿದಾ, ಲವಶ್ ಬ್ರೆಡ್, ಟರ್ಕಿಶ್ ಗೊಝ್ಲೆಮೆ ಬ್ರೆಡ್‌ಗಳು ಲಭ್ಯ ಇವೆ.
*ಮುಹಲಬಿಯಾ ಮಿಲ್ಕ್ ಪುಡ್ಡಿಂಗ್, ಬಕಲ್ವಾ, ಕುನಾಫ, ಟಿರಾಮಿಸು, ಪನ್ನಾ ಕೊಟ್ಟಾ ಐಸ್‌ಕ್ರೀಂಗಳು ಸಿಗಲಿವೆ.
*ಹರೀರಾ, ಝುಪ್ಪ ಟೊಸ್ಕನಾ ರವಿವೊಲಿ ಸೂಪ್, ಸೆಹ್ರಿಯೆಲಿ ಟವೂಕ್ ಕೊರ್ಬಾಸಿ, ಲ್ಯಾಂಬ್ ಆ್ಯಂಡ್ ಮಿಂಡ್ ಶೊರ್ಬಾ ಸೂಪ್‌ಗಳು ಕೂಡ ಲಭ್ಯವಿವೆ.
*ಲೆಬನೀಸ್ ಹುಮ್ಮೂಸ್, ಬಾಬಾ ಘನೌಶ್, ಮುಹಮ್ಮರ, ಮುತಬ್ಬಲ್, ಝಝಿಕಿ, ಫತೂಶ್ ಸಲಾಡ್, ತಬ್ಬೊಲೆಹ್ ಸಲಾಡ್, ಚೆಫ್ಸ್ ತಬ್ಬೊಲೆಹ್ ಸಲಾಡ್ ಇತ್ಯಾದಿ ಕೋಲ್ಡ್ ಮೆಝ್ ಸಿಗಲಿದೆ.
*ಸಂಬೌಶೆಕ್ ಬಿನ್ ದಜಾಜ್, ಸಂಬೌಶೆಕ್ ಬಿನ್ ಲಹಮ್, ಕಿಬ್ಬೆ (ಆಡು/ಕುರಿ), ಫಲಾಫೆಲ್, ಫಲಾಫೆಲ್ (ಸಸ್ಯಹಾರಿ) ವ್ರಾಪ್ ಇತ್ಯಾದಿ ಹಾಟ್ ಮೆಝ್ ಲಭ್ಯವಿದೆ.
*ಅಂಕರ, ಶ್ರಿಂಪ್, ಕಬಾಬ್ಸ್, ಕಬಾಬ್ ಸಮಕ್, ಅಂಟಲ್ಯ ಲ್ಯಾಂಬ್ ಚಾಪ್ಸ್ ಅಲ್ಲದೆ ಮೆಡಿಟೇರಿಯನ್ ಶೈಲಿಯ ರೋಸ್ಟ್ ಮಾಡಲಾದ ಕುರಿ ಕಾಲು ಈ ಫೆಸ್ಟಿವಲ್‌ನ ವಿಶೇಷ ಆಕರ್ಷಣೆಯಾಗಿದೆ.
"ಕಾರ್ಯನಿಮಿತ್ತ ನಾವು ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದೆವು. ಇಲ್ಲಿ ‘ದಿ ಓಶಿಯನ್ ಪರ್ಲ್’ನಲ್ಲಿ ‘ಮೆಡಿಟರ್ರೇನಿಯನ್ ಫುಡ್ ಪೆಸ್ಟಿವಲ್’ ಇರುವ ಬಗ್ಗೆ ಮಾಹಿತಿ ಸಿಕ್ಕಿತು. ತಕ್ಷಣ ಇಲ್ಲಿಗೆ ಕುಟುಂಬ ಸಮೇತ ಧಾವಿಸಿ ಬಂದೆವು. ತುಂಬಾ ಶುಚಿ-ರುಚಿಯಾದ ಆಹಾರವನ್ನೇ ನಾವು ಸವಿದೆವು. ತುಂಬಾ ಖುಷಿ ಆಯಿತು".
-ಅಕ್ಷಿತಾ ಕಾಮತ್, ಬೆಂಗಳೂರು, ಗ್ರಾಹಕಿ
"ಕಳೆದ ಬಾರಿ ನಾವು ಬಿರಿಯಾನಿ-ಕಬಾಬ್ ಫೆಸ್ಟಿವಲ್ ಮಾಡಿದ್ದೆವು. ಗ್ರಾಹಕರಿಂದ ಉತ್ತಮ ಸ್ಪಂದನ ವ್ಯಕ್ತವಾಗಿತ್ತು. ಈ ಬಾರಿ ಮೆಡಿಟರ್ರೇನಿಯನ್ ಸಮುದ್ರ ತೀರ ರಾಷ್ಟ್ರಗಳ ನಾನಾ ಬಗೆಯ ಆಹಾರ, ಖಾದ್ಯಗಳನ್ನು ತಯಾರಿಸಿ ಗ್ರಾಹಕರಿಗೆ ಉಣಬಡಿಸುತ್ತಿದ್ದೇವೆ. ನಮ್ಮ ಖಾಯಂ ಗ್ರಾಹಕರಲ್ಲದೆ ಫೆಸ್ಟಿವಲ್‌ನ ಹಿರಿಮೆ ಹೆಚ್ಚಿಸಲು ಹೊಸ ಹೊಸ ಗ್ರಾಹಕರು ಕೂಡ ಇಲ್ಲಿಗೆ ಆಗಮಿಸುತ್ತಿರುವುದು ವಿಶೇಷ. ಹಲವರು ಇಲ್ಲಿಗೆ ಆಗಮಿಸಿ ರುಚಿ ಸವಿದು ಪಾರ್ಸೆಲ್ ಕೊಂಡೊಯ್ಯುತ್ತಾರೆ. ಇನ್ನು ಕೆಲವರು ಆರ್ಡರ್ ಮಾಡುತ್ತಾರೆ. ಮತ್ತೆ ಕೆಲವರು ಸೀಟ್‌ಗಳನ್ನು ಕೂಡಾ ಬುಕ್ ಮಾಡುತ್ತಿದ್ದಾರೆ".
-ಮಹೇಶ್/ಅಣ್ಣಪ್ಪ ಕಾಮತ್, ದಿ ಓಶಿಯನ್ ಪರ್ಲ್, ಮಂಗಳೂರು
"ಯುರೋಪ್ ಖಂಡದ ಮೆಡಿಟರ್ರೇನಿಯನ್ ಸಮುದ್ರ ತೀರ ರಾಷ್ಟ್ರಗಳ ವೈವಿಧ್ಯಮಯ ಆಹಾರ/ಖಾದ್ಯಗಳನ್ನು ಗ್ರಾಹಕರಿಗೆ ನೀಡುವುದೇ ಈ ಫೆಸ್ಟಿವಲ್‌ನ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ನಾವು ನೈಸರ್ಗಿಕವಾದ ಮಸಾಲೆಗಳಿಂದ ತಯಾರಿಸಿದ ಆಹಾರವನ್ನು ಗ್ರಾಹಕರಿಗೆ ನೀಡುತ್ತಿದ್ದೇವೆ. ಮನೆಯಲ್ಲಿ ತಯಾರಿಸಲಾದ ಆಹಾರವನ್ನು ಸವಿಯುವ ವಾತಾವರಣವನ್ನು ಸೃಷ್ಟಿಸುತ್ತಿದ್ದೇವೆ".
-ರಾಹುಲ್ ಶೆಫ್, ದಿ ಓಶಿಯನ್ ಪರ್ಲ್, ಮಂಗಳೂರು