ಮಂಗಳೂರು: ಮೊಹಮ್ಮದ್ ಸಲಾಹುದ್ದೀನ್‌ರಿಂದ ಷೇರು ಮಾರುಕಟ್ಟೆ ಬಗ್ಗೆ ಅಧ್ಯಯನ ಶಿಬಿರ

Update: 2024-11-03 14:57 GMT

ಮಂಗಳೂರು: ಷೇರು ಮಾರುಕಟ್ಟೆ ಹೂಡಿಕೆದಾರ ಮತ್ತು ತರಬೇತುದಾರರಾದ ಮೊಹಮ್ಮದ್ ಸಲಾಹುದ್ದೀನ್ ಅವರು ಷೇರು ಮಾರುಕಟ್ಟೆ ಬಗ್ಗೆ ಅಧ್ಯಯನ ಶಿಬಿರವನ್ನು ಮಂಗಳೂರಿನ ಹೋಟೆಲ್ ಶ್ರೀನಿವಾಸ್ ನಲ್ಲಿ ರವಿವಾರ ನಡೆಸಿದರು.

ಈ ಸ್ಟಾಕ್ ಮಾರ್ಕೆಟ್ ಶಿಬಿರಾರ್ಥದಲ್ಲಿ ಹಲವಾರು ಜನರು ಭಾಗವಹಿಸಿ, ಅದರ ಪ್ರಯೋಜನವನ್ನು ಪಡೆದುಕೊಂಡರು.


ಸಲಾಹುದ್ದೀನ್ ಅವರು ಕಳೆದ 10 ವರ್ಷಗಳಿಂದ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿ, ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಯ ಬಗ್ಗೆ ಅರಿತುಕೊಂಡಿದ್ದಾರೆ. ಸರಿಯಾದ ಮಾಹಿತಿ ಹೊಂದಿರುವ ಹೂಡಿಕೆದಾರನಾಗಲು ಮತ್ತು ಜನರನ್ನು ಷೇರು ಮಾರುಕಟ್ಟೆಯತ್ತ ಸರಿಯಾದ ಮಾರ್ಗದಲ್ಲಿ ಶಕ್ತಿಯುತಗೊಳಿಸಲು ಈ ರೀತಿಯ ಕಾರ್ಯಾಗಾರವನ್ನು ನಡೆಸಿ ಜನರ ಹೂಡಿಕೆ ಪ್ರಯಾಣವನ್ನು ಅವರು ಸುಲಭಗೊಳಿಸುತ್ತಿದ್ದಾರೆ.


ಇದೇ ಸಂದರ್ಭ ಅವರ ಬಹುನಿರೀಕ್ಷಿತ ಷೇರು ಮಾರುಕಟ್ಟೆ ಬಗೆಗಿನ ʼಗೈಡ್ ಬುಕ್ʼ ಅನ್ನು ಬಿಡುಗಡೆಗೊಳಿಸಲಾಯಿತು. ಮುಂದಿನ ದಿನಗಳಲ್ಲಿ ಷೇರು ಮಾರುಕಟ್ಟೆ ಬಗೆಗಿನ ಹೆಚ್ಚಿನ ಅಧ್ಯಯನ ಮತ್ತು ವೈಯಕ್ತಿಕ ಹಣಕಾಸು ನಿರ್ವಹಣೆ, ಇಂತಹ ಹಲವಾರು ಯೋಜನೆಗಳನ್ನು Wealthwala.in ಎಂಬ ಜಾಲತಾಣ ಮೂಲಕ ಜನರಿಗೆ ತಲುಪಿಸುವ ಯೋಜನೆಯನ್ನು ಹಾಕಿದ್ದಾರೆ.

ನಿಮಗೂ ಷೇರು ಮಾರುಕಟ್ಟೆಯಲ್ಲಿ ಹೂಡಿಗೆ ಮಾಡಲು ಆಸಕ್ತಿ ಹೊಂದಿದ್ದು, ಸರಿಯಾದ ಮಾರ್ಗದರ್ಶನದ ಕೊರತೆ ಇದ್ದಲ್ಲಿ ಸಲಾಹುದ್ದೀನ್ ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.









Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News