ಕುರ್‌ಆನ್ ಕಂಠಪಾಠ ಸ್ಪರ್ಧೆ: ಕರ್ನಾಟಕ, ಕೇರಳ ವಿಭಾಗದಲ್ಲಿ ಮಂಗಳೂರಿನ ಹಾಫಿಝ್ ತೌಹೀದುರ್ರಹ್ಮಾನ್‌ ಪ್ರಥಮ

Update: 2023-11-20 08:58 GMT

ಮಂಗಳೂರು: ಜಮಿಯತುಲ್ಇಸ್ಲಾಮಿಯಾ, ಇಶಾಅತುಲ್ ಉಲೂಮ್, ಅಕ್ಕಾಲ್ಕೋವಾ, ಮಹಾರಾಷ್ಟ್ರ ಇದರ ವತಿಯಿಂದ ರಾಷ್ಟ್ರಮಟ್ಟದ ಕುರ್‌ಆನ್ ಕಂಠಪಾಠ  ಸ್ಪರ್ಧೆ ನಡೆಯಿತು.

ಮಂಗಳೂರಿನ ಇಕ್ರಾ ಅರೇಬಿಕ್ ಸ್ಕೂಲ್‌ ವಿದ್ಯಾರ್ಥಿ, ರಿಝಾವುಲ್ ಕರೀಮ್ ಸಾಬ್ ಅವರ ಪುತ್ರ ಹಾಫಿಝ್ ತೌಹೀದುರ್ರಹ್ಮಾನ್‌ ಅವರು ಕರ್ನಾಟಕ ಮತ್ತು ಕೇರಳ ವಿಭಾಗಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ರಾಷ್ಟ್ರಮಟ್ಟದ ಪವಿತ್ರ ಕುರ್‌ಆನ್ ಕಂಠಪಾಠ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿ ಹಾಫೀಝ್ ತೌಹೀದುರ್ರಹ್ಮಾನ್‌ ಅವರು ಪ್ರಸ್ತುತ ಇಸ್ಲಾಮೀ ಶಿಕ್ಷಣದ ಜೊತೆಗೆ ಪಿಯುಸಿ ಕಲಿಕೆಯನ್ನು ಮುಂದುವರಿಸುತ್ತಿದ್ದಾರೆ.

ಈ ಕಾರ್ಯಕ್ರಮವು ಬೆಂಗಳೂರಿನ ಜಾಮಿಉಲ್ ಉಲೂಮ್ ಅರೇಬಿಕ್ ಕಾಲೇಜಿನಲ್ಲಿ ನಡೆಯಿತು. ಮುಂದಿನ ರಾಷ್ಟ್ರಮಟ್ಟದ ಕಾರ್ಯಕ್ರಮವು ಮಹಾರಾಷ್ಟ್ರದ ಜಾಮಿಯಾ ಅಕ್ಕಾಲ್ಕೋವಾದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News