ಸ್ಕೇಟಿಂಗ್ ಸ್ಪರ್ಧೆ: ಮಂಗಳೂರಿನ ಅನಘಾ, ಆರ್ನಾಗೆ ಪದಕ

Update: 2023-08-25 07:16 GMT

ಮಂಗಳೂರು: ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ 2ನೇ ರ‌್ಯಾಂಕಿಂಗ್ ರೋಲರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮಂಗಳೂರಿನ ಇಬ್ಬರು ಸಹೋದರಿಯರು ಅಮೋಘ ಸಾಧನೆ ಮೆರೆದಿದ್ದಾರೆ. ಆಗಸ್ಟ್ 18 ರಿಂದ 20 ರವರೆಗೆ ನಡೆದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಇದರ 3ನೇ ತರಗತಿ ವಿದ್ಯಾರ್ಥಿನಿ ಆರ್ನಾ ರಾಜೇಶ್ ಹಾಗೂ 8ನೇ ತರಗತಿ ವಿದ್ಯಾರ್ಥಿನಿ ಅನಘಾ ರಾಜೇಶ್ ಪದಕ ಗಿಟ್ಟಿಸಿಕೊಂಡಿದ್ದಾರೆ.

ಆರ್ನಾ ರಾಜೇಶ್ 7-9 ವಯೋಮಿತಿ ವಿಭಾಗದ 1000 ಮೀಟರ್ ರಿಂಕ್ ರೇಸ್ ನಲ್ಲಿ ಬೆಳ್ಳಿ, 500 ಮೀಟರ್ ರಿಂಕ್ ರೇಸ್ ನಲ್ಲಿ ಕಂಚು ಪದಕ ಪಡೆದಿದ್ದಾರೆ.

11-14ರ ವಯೋಮಿತಿ ವಿಭಾಗದಲ್ಲಿ ಅನಘಾ ರಾಜೇಶ್ 500ಮೀ., 1000 ಮೀ. ಹಾಗೂ ಟ್ರ್ಯಾಕ್ ಎಲಿಮಿನೇಶನ್ 5000 ಮೀ. ರಿಂಕ್ ರೇಸ್ ನಲ್ಲಿ 3 ಕಂಚಿನ ಪದಕ ಪಡೆದಿದ್ದಾರೆ.

ಇವರು ಮಂಗಳೂರಿನ ವೈದ್ಯ ದಂಪತಿ ಡಾ. ರಾಜೇಶ್ ಹುಕ್ಕೇರಿ ಹಾಗೂ ಡಾ. ಅನಿತಾ ರಾಜೇಶ್ ಹುಕ್ಕೇರಿ ದಂಪತಿಯ ಪುತ್ರಿಯರಾಗಿದ್ದಾರೆ.

ಬೆಂಗಳೂರಿನ ಸ್ಕೇಟಿಂಗ್ ತರಬೇತಿಯ ಮುಖ್ಯ ಕೋಚ್ ಪ್ರತೀಕ್ ರಾಜಾ ಹಾಗೂ ಸಹಾಯಕ ಕೋಚ್ ತೇಜಸ್ವಿನಿ ಕನ್ಬಿಲ್ ಇವರ ತರಬೇತಿ ಪಡೆಯುತ್ತಿರುವ ಅನಘಾ ಹಾಗೂ ಆರ್ನಾ ಮಂಗಳೂರಿನ ಕುಡ್ಲಾಸ್ ರೋಲರ್ಸ್ ಸ್ಕೇಟಿಂಗ್ ಕ್ಲಬ್ ಸದಸ್ಯೆಯರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News