ಅಬೂಸಾಲಿಹ್ ಕುತ್ತೆತ್ತೂರು
Update: 2023-07-06 16:59 GMT
ಮಂಗಳೂರು, ಜು.6: ಮೂಲತಃ ಕುತ್ತೆತ್ತೂರು ನಿವಾಸಿಯಾಗಿದ್ದ ಕೆ.ಪಿ. ಅಬೂಸಾಲಿಹ್ (82) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಗರದಲ್ಲಿರುವ ತನ್ನ ಪುತ್ರನ ಮನೆಯಲ್ಲಿ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ವ್ಯಾಪಾರಿಯಾಗಿದ್ದ ಅಬೂಸಾಲಿಹ್ ಅವರು ಸೂರಿಂಜೆ ಜುಮಾ ಮಸೀದಿಯ ಕಾರ್ಯದರ್ಶಿಯಾಗಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು.