ಬಿ. ಹರೀಶ್ ಆಚಾರ್ಯ

Update: 2023-07-11 17:14 GMT

ಮಂಗಳೂರು, ಜು.11: ನಗರದಲ್ಲಿ ಹಿರಿಯ ನ್ಯಾಯವಾದಿಯಾಗಿದ್ದ ಬಿ. ಹರೀಶ್ ಆಚಾರ್ಯ (60)ಅವರು ಜು.9ರ ಬೆಳಗ್ಗೆ 10ರಿಂದ ಜು.11ರ ಪೂ.11ರ ಮಧ್ಯೆ ತನ್ನ ಮನೆಯಲ್ಲಿ ನಿಧನರಾಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಉರ್ವ ಠಾಣಾ ವ್ಯಾಪ್ತಿಯ ಬಿಜೈ ಬಾರೆಬೈಲ್‌ನ ನಿರ್ಮಲ ನಿಲಯದಲ್ಲಿ ಒಂಟಿಯಾಗಿ ವಾಸವಾಗಿದ್ದ ಇವರು ಹೃದಯಾಘಾತ ಅಥವಾ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಇವರ ವಾರಸುದಾರರು/ರಕ್ತ ಸಂಬಂಧಿಗಳು ಘಟನೆ ನಡೆದ ಸ್ಥಳದಲ್ಲಿರದ ಕಾರಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ವಾರಸುದಾರರು ಇದ್ದಲ್ಲಿ 0824-2220521/2220800/2220822ಕ್ಕೆ ಮಾಹಿತಿ ನೀಡುವಂತೆ ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹರಿಶ್ಚಂದ್ರ
ವಿಮಲ ಭಟ್
ಕಮಲಾಕ್ಷ