ಬಾಬುರಾಯ ಕಾಮತ್‌ ನಿಧನ

Update: 2023-08-04 17:16 GMT

ಮಂಗಳೂರಿನ ಶರ್ಬತ್‌ಕಟ್ಟೆ ನಿವಾಸಿ ಬಾಬುರಾಯ ಕಾಮತ್‌ ರವರು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಅವರು ಓರ್ವ ಪುತ್ರಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಅವರು ಕೆಇಬಿ, ಕವಿಪ್ರನಿನಿ ಮತ್ತು ಮೆಸ್ಕಾಂನಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ತನ್ನ ಪ್ರಾಮಾಣಿಕತೆ ಮತ್ತ ಕರ್ತವ್ಯ ಪರತೆಯಿಂದ ಇಲಾಖೆಯಲ್ಲಿ ಜನಾನುರಾಗಿಯಾದ್ದರು. ಅಲ್ಲದೇ ಇಲಾಖೆಯ ಸಹೋದ್ಯೋಗಿಗಳಿಗೆ, ಕಿರಿಯರಿಗೆ ಸದಾ ಮಾರ್ಗದರ್ಶಕರಾಗಿದ್ದ ಇವರು ಕವಿಪ್ರನಿನಿಯಲ್ಲಿ ಏಪ್ರಿಲ್‌ -2004 ರಲ್ಲಿ ಲೆಕ್ಕಾಧಿಕಾರಿಯಾಗಿ ನಿವತ್ತರಾಗಿದ್ದರು.

ಇಲಾಖೆಯ ನೌಕರರ ಸೇವಾ ನಿಯಮಗಳು, ವಿದ್ಯುಚ್ಛಕ್ತಿ ಸರಬರಾಜು ನಿಬಂಧನೆಗಳು, ಲೆಕ್ಕಪತ್ರಗಳ ವಿಷಯದಲ್ಲಿ ವಿಶೇಷ ಅನುಭವ ಹೊಂದಿದ್ದವರಾಗಿದ್ದು, ಇಲಾಖಾ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ತರಗತಿಗಳನ್ನು ನಡೆಸಿ ಪ್ರೋತ್ಸಾಹಿಸುತ್ತಿದ್ದರು.

ನಿವೃತ್ತರಾಗಿದ್ದರೂ, ಕಂಪೆನಿಯ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದವರಾಗಿ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹರಿಶ್ಚಂದ್ರ
ವಿಮಲ ಭಟ್
ಕಮಲಾಕ್ಷ
ಹಮೀದ್ ಹಾಜಿ