ಗೋಪಾಲ ಪೂಜಾರಿ ನಿಧನ
Update: 2023-08-29 16:41 GMT
ಮಂಗಳೂರು, ಆ.29: ನಗರ ಹೊರವಲಯದ ನೀರುಮಾರ್ಗ ಸಮೀಪದ ಪಡು ಪಿಲ್ಚಂಡಿ ನಿವಾಸಿ ವೃತ್ತಿಯಲ್ಲಿ ಕೃಷಿಕರಾಗಿದ್ದ ಗೋಪಾಲ ಪೂಜಾರಿ (74) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ತನ್ನ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಪತ್ರಕರ್ತರಾದ ವಿಜಯ ಕೋಟ್ಯಾನ್ ಪಡು ಹಾಗೂ ಪ್ರವೀಣ್ ಕುಮಾರ್ ಪಡು ಸಹಿತ ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.