ಹಾಜಿ ಅಬ್ದುಲ್ ರಝಾಕ್ ಪಡೀಲ್ ನಿಧನ
Update: 2024-04-09 10:03 GMT
ಮಂಗಳೂರು, ಎ.9: ನಗರದ ಪಡೀಲ್ ನಿವಾಸಿ, ಉದ್ಯಮಿ ಹಾಜಿ ಅಬ್ದುಲ್ ರಝಾಕ್ ಪಡೀಲ್ (76) ಮಂಗಳವಾರ ನಿಧನರಾದರು.
ಕರ್ನಾಟಕ ರಾಜ್ಯ ಮುಸ್ಲಿಂ ಲೀಗ್ ಅಧ್ಯಕ್ಷರಾಗಿದ್ದ ಮರ್ಹೂಂ ಸಿ. ಅಬ್ದುಲ್ ಹಮೀದ್ ಸಾಹೇಬ್ ಅವರ ಅಳಿಯ ಹಾಗೂ ದ.ಕ. ಜಿಲ್ಲಾ ಮುಸ್ಲಿಂ ಲೀಗ್ ನ ಹಾಲಿ ಅಧ್ಯಕ್ಷ ಸಿ. ಅಬ್ದುಲ್ ರಹಿಮಾನ್ ಅವರ ಭಾವನಾಗಿದ್ದ ಹಾಜಿ ಅಬ್ದುಲ್ ರಝಾಕ್ ಪಡೀಲ್, ಮುಸ್ಲಿಂ ಲೀಗ್‌ನ ಬೆಂಬಲಿಗರಾಗಿದ್ದರು ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕರಾದ ಅಡ್ವಕೇಟ್ ಎಸ್. ಸುಲೇಮಾನ್ ಹಾಗೂ ಎಎಸ್‌ಇ ಕರೀಂ ಕಡಬ, ಎಚ್. ಮುಹಮ್ಮದ್ ಇಸ್ಮಾಯಿಲ್, ಜಿಲ್ಲಾ ಕೋಶಾಧಿಕಾರಿ ರಿಯಾಝ್ ಹರೇಕಳ, ಪ್ರಧಾನ ಕಾರ್ಯದರ್ಶಿ ನೌಶಾದ್ ಮಲಾರ್ ಸಂತಾಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು, ಒಬ್ಬರು ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.